ಇತ್ತೀಚೆಗೆ ಸುರಿದ ಭಾರೀ ಮಳೆಗೆ ಬೆಳ್ಳಾರೆ ಗ್ರಾಮದ ಮೂಡಾಯಿತೋಟ ಸಂಪರ್ಕಿಸುವ ಕಾಲು ಸೇತುವೆಯ ತಡೆಬೇಲಿಗೆ ಹಾನಿಯಾಗಿದೆ.
















ಗೌರಿಹೊಳೆಯಲ್ಲಿ ಭಾರೀ ಪ್ರಮಾಣದ ನೀರಿನ ಹರಿವು ಬಂದ ಕಾರಣ ಸೇತುವೆಯ ತಡೆಗೋಡೆಗೆ ಮರದ ದಿಮ್ಮಿಗಳು ಗುದ್ದಿದ ಪರಿಣಾಮ ಕಬ್ಬಿಣದ ತಡೆಬೇಲಿ ಒಂದು ಸೈಡ್ ವಾಲಿ ನಿಂತಿದೆ.

ಈ ಸೇತುವೆಯಲ್ಲಿ ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ದಿನನಿತ್ಯ ಸಂಚರಿಸುತ್ತಿದ್ದು ತಡೆಬೇಲಿಯನ್ನು ಕೂಡಲೇ ದುರಸ್ಥಿಗೊಳಿಸಬೇಕೆಂದು ಅಲ್ಲಿಯ ಫಲಾನುಭವಿಗಳು ಒತ್ತಾಯಿಸಿದ್ದಾರೆ.










