ನಿರಂತರ ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವಾಗಿರುವ
ಸುಳ್ಯದ ರಂಗಮನೆ ಸಂಸ್ಥೆಗೆ ಯಕ್ಷಧ್ರುವ ಪಟ್ಲ ಫೌಂಡೇಶನ್ (ರಿ.) ಮಂಗಳೂರು
ಇದರ ದಶ ಸಂಭ್ರಮದ ಅಂಗವಾಗಿ ನಡೆದ ರಾಷ್ಟ್ರೀಯ ಕಲಾ ಸಮ್ಮೇಳನದಲ್ಲಿ 2025 ನೇ ಸಾಲಿನ ‘ಯಕ್ಷಧ್ರುವ ಕಲಾ ಗೌರವ’ ಪ್ರಶಸ್ತಿ ಯನ್ನು ಪ್ರದಾನ ಮಾಡಲಾಯಿತು.
ರಂಗಮನೆಯ ಸ್ಥಾಪಕರಾದ ಡಾ| ಜೀವನ್ ರಾಂ ಸುಳ್ಯರವರು ಈ ಪ್ರಶಸ್ತಿಯನ್ನು ಸ್ವೀಕರಿಸಿದರು.
ವೇದಿಕೆಯಲ್ಲಿ ಉಡುಪಿ ಫ್ಯಾಮಿಲಿ ಟ್ರಸ್ಟ್ ನ ಅಧ್ಯಕ್ಷ ನಾಡೋಜ ಜಿ.ಶಂಕರ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ, ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ| ಪಿ.ಎಲ್.ಧರ್ಮ, ವಿಶ್ರಾಂತ ಕುಲಪತಿ ಪ್ರೊ| ಬಿ.ಎ.ವಿವೇಕ್ ರೈ, ವಿಶ್ವವಾಣಿ ಪತ್ರಿಕೆಯ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ಉದ್ಯಮಿ ಶಶಿಧರ್ ಶೆಟ್ಟಿ ಬರೋಡಾ, ಸಾಗರದ ಶಾಸಕ ಗೋಪಾಲಕೃಷ್ಣ ಬೇಳೂರು, ಯಕ್ಷ ಧ್ರುವ ಪಟ್ಲ ಫೌಂಡೇಶನ್ ನ ಸ್ಥಾಪಕ ಭಾಗವತ ಸತೀಶ್ ಪಟ್ಲ, ನಿವೃತ್ತ ಸೇನಾಧಿಕಾರಿ ಕರ್ನಲ್ ನಿಟ್ಟೆ ಗುತ್ತು ಶರತ್ ಭಂಡಾರಿ, ಅಲಂಗಾರು ವೇದಮೂರ್ತಿ ಈಶ್ವರ ಭಟ್ ಮೊದಲಾದವರು ಉಪಸ್ಥಿತರಿದ್ದರು.
ಪ್ರಶಸ್ತಿಯು ರೇಶ್ಮೆ ಶಾಲು, ಪೇಟ ಫಲಕ ಸ್ಮರಣಿಕೆಗಳೊಂದಿಗೆ ರೂ: ಇಪ್ಪತ್ತು ಸಾವಿರ ನಗದನ್ನು ಹೊಂದಿತ್ತು.















ಬಾಕ್ಸ್ 👇
ಗಣ್ಯಾತಿಗಣ್ಯರ ಸಮ್ಮುಖದಲ್ಲಿ ರಂಗಮನೆ ಸಂಸ್ಥೆಗೆ ನೀಡಿದ ಈ ಗೌರವವನ್ನು ಸ್ವೀಕರಿಸಿದ್ದು ನನಗೆ ಬಹಳ ಖುಷಿಯಾಗಿದೆ. ಕಳೆದ 24 ವರ್ಷಗಳಿಂದ ರಂಗಮನೆಯನ್ನು ಉಳಿಸಿ ಬೆಳೆಸಿ ಪ್ರೋತ್ಸಾಹಿಸುತ್ತಾ ಬಂದಿರುವ ಸುಳ್ಯದ ಎಲ್ಲ ಸಾಂಸ್ಕೃತಿಕ ಪ್ರಿಯರಿಗೆ, ಬೆನ್ನೆಲುಬಾಗಿದ್ದ ರಂಗಮನೆಯ ಸದಸ್ಯರಿಗೆ ನನ್ನ ಹೆತ್ತವರಿಗೆ ಮತ್ತು ರಂಗಮನೆಯ ಸರ್ವ ಅಭಿಮಾನಿಗಳಿಗೆ ಈ ಗೌರವ ಸಲ್ಲುತ್ತದೆ.
ಡಾ| ಜೀವನ್ ರಾಂ ಸುಳ್ಯ










