ಜನ ಸೇವೆಗೆ ಹೈಕಮಾಂಡ್ ಹೇಳಬೇಕೆಂದು ಕಾಯುವುದಿಲ್ಲ : ನಿರಂತರ ಕೆಲಸ

0

ಶಾಸಕರು ಒಬ್ಬರನ್ನೇ ದೂರುವುದಿಲ್ಲ : ಜನಪ್ರತಿನಿಧಿಗಳು ಕೆಲಸ ಮಾಡಬೇಕು

ಅಧಿಕಾರಿಗಳು ಕೆಲಸ ಮಾಡದಿದ್ದರೆ ನಾವು ಸುಮ್ಮನಿರುವುದಿಲ್ಲ : ಬೊಳ್ಳೂರು ಟೀಮ್ ಪತ್ರಿಕಾಗೋಷ್ಠಿ

ಜನ ಸೇವೆ ಮಾಡಲು ಯಾವ ಹೈಕಮಾಂಡ್ ನಿರ್ದೇಶನ ನೀಡಬೇಕೆಂದು ನಾನು ಕಾಯುವುದಿಲ್ಲ. ಈ ಹಿಂದೆಯೂ ಕೆಲಸ ಮಾಡಿzವೆ. ಮುಂದೆಯೂ ಮಾಡುತ್ತೇವೆ. ಯಾರು ಯಾವ ಕೆಲಸವನ್ನು ಮಾಡಬೇಕೋ ಅವರು ಮಾಡದಿದ್ದಾಗ ನಾವು ಮಾಡಿಯೇ ಮಾಡುತ್ತೇವೆ. ಈಗಾಗಲೇ ಅಧಿಕಾರಿಗಳಿಗೆ ಚುರುಕು ಮುಟ್ಟಿಸುವ ಕೆಲಸ ಮಾಡಿದ್ದು ಅವರು ಕೆಲಸ ಮಾಡದೇ ಸುಮ್ಮನಿದ್ದರೆ ನಾವು ಸುಮ್ಮನಿರುವುದಿಲ್ಲ'' ಎಂದು ಕಾಂಗ್ರೆಸ್ ಮುಖಂಡ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಹೇಳಿದ್ದಾರೆ. ಜೂ.೬ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ರಾಧಾಕೃಷ್ಣ ಬೊಳ್ಳೂರುರವರು,ಈಗಾಗಲೇ ತಾಲೂಕಿನ ಹಲವು ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿ ಜನರಿಗೆ ಆಗಬೇಕಾದ ಸೇವೆಗಳ ಕುರಿತು ಸಲಹೆಯನ್ನು ನೀಡಿzವೆ. ನಾವು ಹೋದಾಗ ಎಲ್ಲರೂ ನಮಗೆ ಸ್ಪಂದನೆ ನೀಡಿದ್ದಾರೆ. ಹಾಗಂದ ಮಾತ್ರಕ್ಕೆ ಎಲ್ಲ ಸಮಸ್ಯೆಗಳು ಮುಗಿಯುತ್ತದೆ ಎಂದು ನಾವು ಹೇಳುವುದಿಲ್ಲ. ಗಡುವು ನೀಡಿzವೆ. ನಾವು ಫಾಲೋಅಪ್ ಮಾಡುತ್ತೇವೆ. ಅಧಿಕಾರಿಗಳು ಕೆಲಸ ಮಾಡುವುದಿಲ್ಲವಾದರೆ ನಾವು ಸುಮ್ಮನಿರುವುದಿಲ್ಲ. ಮೇಲಾಧಿಕಾರಿಗಳಿಗೆ, ಸರಕಾರಕ್ಕೆ ತಿಳಿಸುವ ಕೆಲಸ ನಮ್ಮಿಂದ ಆಗುತ್ತದೆ ಎಂದು ಹೇಳಿದರು.


ಸುಳ್ಯದಲ್ಲಿ ಟ್ರೀ ಕಟ್ಟಿಂಗ್ ಆಗದೇ ಆಗಿರುವ ಸಮಸ್ಯೆಯನ್ನು ಸುಳ್ಯದ ಮೆಸ್ಕಾಂ ಅಧಿಕಾರಿಗಳಿಗೆ ತಿಳಿಸಿzವೆ. ಚೊಕ್ಕಾಡಿ ರಸ್ತೆಯಾಗಿ ೩೩ ಕೆ.ವಿ. ವಿದ್ಯುತ್ ಲೈನ್ ಅಂಡರ್ ಪಾಸ್ ಬರುವುದರಿಂದ ಆಗಿರುವ ಸಮಸ್ಯೆಯ ಕುರಿತು ನಾವು ತಹಶೀಲ್ದಾರ್‌ರಿಗೆ ತಿಳಿಸಿzವೆ. ಅವರು ಖುದ್ದಾಗಿ ಸ್ಥಳ ಭೇಟಿ ನೀಡಿ ಪರಿಶೀಲನೆ ನಡೆಸಿ, ಜನರಿಗಾಗುವ ಸಮಸ್ಯೆಯನ್ನು ಸದ್ಯಕ್ಕೆ ನಿವಾರಿಸಿದ್ದಾರೆ. ಆದರೆ ಸುಳ್ಯದ ಮೆಸ್ಕಾಂ ಇಲಾಖೆಯ ಅಧಿಕಾರಿಗಳು ತೃಪ್ತಿದಾಯ ಕೆಲಸ ಮಾಡುತ್ತಿಲ್ಲ. ಬೆಳ್ಳಾರೆ ವ್ಯಾಪ್ತಿಯಲ್ಲಿ ಉತ್ತಮ ಕೆಲಸ ಮೆಸ್ಕಾಂ ವತಿಯಿಂದ ಆಗುತ್ತಿದೆ. ನಾವು ಗಮನಿಸುತ್ತಿzವೆ ಎಂದು ಬೊಳ್ಳೂರು ಹೇಳಿದರು.


ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಪೈಪ್ ಲೈನ್ ಕಾಮಗಾರಿಯ ಕುರಿತು ಹೇಳಿದ ಅವರು, ಈ ಕುರಿತು ನಾವು ಇಂಜಿನಿಯರ್‌ರಿಗೆ ಮಾತನಾಡಿzವೆ. ಆಗುತ್ತಿರುವ ಸಮಸ್ಯೆಯನ್ನೂ ವಿವರಿಸಿzವೆ ಎಂದು ಹೇಳಿದ ಅವರು, ಆ ಯೋಜನೆ ಸುಳ್ಯಕ್ಕೆ ಪ್ರಸ್ತುತವೇ ಎನ್ನುವುದನ್ನು ನಾವು ತಿಳಿದುಕೊಳ್ಳಬೇಕು ಎಂದು ಹೇಳಿದರು.
ಮರ್ಕಂಜದ ದಾಸರಬೈಲು ಶಾಲೆಗೆ ಶಿಕ್ಷಕರ ಇಲ್ಲದೆ ವಿದ್ಯಾಭ್ಯಾಸಕ್ಕೆ ಸಮಸ್ಯೆಯಾದಾಗ, ಸುಳ್ಯದ ಮಾದರಿ ಶಾಲೆಯಲ್ಲಿ ಬರೆ ಜರಿತದಿಂದ ಹಾನಿ ಸಂಭವಿಸಿದ್ದು ಹಾಗೂ ಶೌಚಾಲಯದ ಕಳಪೆ ಕಾಮಗಾರಿಯ ಕುರಿತು ಸ್ಥಳಭೇಟಿ ಮಾಡಿzವೆ. ಕ್ಷೇತ್ರ ಶಿಕ್ಷಣಾಧಿಕಾರಿಯವರನ್ನು ಬರಮಾಡಿಕೊಂಡು ಸಮಸ್ಯೆ ಇತ್ಯರ್ಥಕ್ಕೆ ಸಲಹೆ ನೀಡಿzವೆ. ನಗರ ಸಮಸ್ಯೆಗಳು ಒಂದೆರಡಲ್ಲ. ಈ ಕುರಿತು ನಗರ ಪಂಚಾಯತ್‌ಗೆ ಭೇಟಿ ನೀಡಿ, ಮುಖ್ಯಾಧಿಕಾರಿಯವರಲ್ಲಿ ಸಮಾಲೋಚನೆ ನಡೆಸಲಾಗಿದೆ. ಅರಣ್ಯ ಇಲಾಖೆ, ಕಂದಾಯ, ಲೋಕೋಪಯೋಗಿ, ರಾಷ್ಟ್ರೀಯ ಹೆದ್ದಾರಿ ಇಲಾಖೆಯವರು ಮಾಡಬೇಕಾದ ಕೆಲಸ, ಪೋಲೀಸ್ ಇಲಾಖೆಗಳಿಗೆ ಹೋಗಿ ಅಲ್ಲಲ್ಲಿಯ ಸಮಸ್ಯೆಯ ಕುರಿತು ಹಾಗೂ ನಾವು ಸಲಹೆಗಳನ್ನು ನೀಡಿzವೆ. ಎಂದು ಬೊಳ್ಳೂರು ಹೇಳಿದರು.


ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪದಾಧಿಕಾರಿಗಳಾದ ಭವಾನಿಶಂಕರ ಕಲ್ಮಡ್ಕ, ಸತ್ಯಕುಮಾರ್ ಆಡಿಂಜ, ದಿನೇಶ್ ಸರಸ್ವತಿಮಹಲ್, ಬಾಲಸುಬ್ರಹ್ಮಣ್ಯ ಮೋಟಡ್ಕ, ಕರುಣಾಕರ ಪಲ್ಲತಡ್ಕ, ಗೋಕುಲ್ ದಾಸ್ ಕೆ, ಶಶಿಧರ ಎಂ.ಜೆ., ಯುವ ಕಾಂಗ್ರೆಸ್ ಅಧ್ಯಕ್ಷರು ಇದ್ದರು.