ಕುಟುಂಬ ಬಾಂಧವ್ಯ ನೆಲೆ ನಿಲ್ಲಿಸಿ,ಬಡವರ ಮೇಲೆ ಕರುಣೆ ತೋರಿ: ಮುದುಗಡ ಉಸ್ತಾದ್ ರವರಿಂದ ಈದ್ ಸಂದೇಶ

ಮೊಗರ್ಪಣೆ ಜುಮಾ ಮಸೀದಿಯಲ್ಲಿ ಸಂಭ್ರಮದ ಬಕ್ರೀದ್ ಹಬ್ಬ ಆಚರಣೆ ಜೂ. 7 ರಂದು ನಡೆಯಿತು. ಮುದರ್ರಿಸ್ ಅಬ್ದುಲ್ ಖಾದರ್ ಸಖಾಫಿ ಅಲ್ ಖಾಮಿಲ್ ರವರು ಈದ್ ನಮಾಜಿನ ನೇತೃತ್ವವನ್ನು ವಹಿಸಿದ್ದರು.
ಈ ಸಂಧರ್ಭದಲ್ಲಿ ಈದ್ ಸಂದೇಶವನ್ನು ನೀಡಿ ಮಾತನಾಡಿದ ಅವರು ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಕುಟುಂಬದ ಸದಸ್ಯರೊಂದಿಗೆ ಪರಸ್ಪರ ಪ್ರೀತಿಮಯ ಜೀವನ ಹಾಗೂ ಬಡವರ ಮೇಲೆ ಕರುಣೆ ತೋರುವ ಮೂಲಕ ಜೀವನವನ್ನು ಅನುಸರಿಸಬೇಕು.ಆ ಮಾರ್ಗದಲ್ಲಿ ನಡೆದರೆ ಮಾತ್ರ ಇಸ್ಲಾಮಿನ ಸತ್ಯ ವಿಶ್ವಾಸಿಗಳಾಗಲು ಸಾಧ್ಯ ಎಂದು ಸಂದೇಶವನ್ನು ನುಡಿದರು.















ಈ ಸಂದರ್ಭದಲ್ಲಿ ಸ್ಥಳೀಯ ಜಮಾಅತ್ ಕಮಿಟಿಯ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಊರಿನ ಸಮಸ್ತ ಮುಸ್ಲಿಂ ಬಾಂಧವರು ಭಾಗವಹಿಸಿದ್ದರು










