
ಸಂಪಾಜೆ ಮಸ್ಜಿದ್ ಅಲ್ ಇಸ್ಲಾಹ್ ಸಲಫಿ ಜುಮ್ಮಾ ಮಸ್ಜಿದ್ ನ ಲ್ಲಿ ಈದ್ ಅಲ್ ಅದ್ಹಾ ನಮಾಜ್ ಹಾಗೂ ಪ್ರವಚನವು ಮಸೀದಿ ಖತೀಬರಾದ ಶಮೀರ್ ಮೆಹಬೂಬ್ ಮೌಲವಿ ಯವರು ನೆರವೇರಿಸಿ
ತ್ಯಾಗ ಬಲಿದಾನದ ಚರಿತ್ರೆಯ ಸಂದೇಶವನ್ನು ನೀಡಿದರು.ನಾವೆಲ್ಲರೂ ಶಾಂತಿ,ಸಹೋದರತೆಯೊಂದಿಗೆ ಬಾಳಬೇಕು.
ಇಬ್ರಾಹಿಂ ನಬಿ ಮತ್ತು ಇಸ್ಮಾಯಿಲ್ ನಬಿ ಯವರ ತೌಹೀದ್ ನ ಆದರ್ಶ, ವಿನಯ,ಅನುಸರಣೆ ನಮ್ಮಲ್ಲಿ ಇದೆಯಾ ಎಂದು ನಮ್ಮನ್ನು ನಾವೇ ಕೂಲಂಕುಷವಾಗಿ ಅವಲೋಕನ ಮಾಡಬೇಕೆಂದು ಪ್ರವಚನದಲ್ಲಿ ಸಂದೇಶ ನೀಡಿದರು.
















ಕಳೆದ ಸಾಲಿನ ಮದ್ರಸ ಪಬ್ಲಿಕ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮಸೀದಿ ಆಡಳಿತ ಸಮಿತಿ ಸದಸ್ಯರು ಸೇರ್ಟಿಫಿಕೇಟ್ ನೀಡಿ ಗೌರವಿಸಿದರು.
ಈದ್ ನಮಾಜ್ ನಲ್ಲಿ ಪಾಲ್ಗೊಂಡ ಎಲ್ಲರೂ ಆಲಿಂಗನ ಮಾಡಿ ಪರಸ್ಪರ ಈದ್ ಶುಭಾಶಯ ಕೋರಿದರು.











