ಜೂ. 9 : ದೇಂಗೋಡಿ ಶ್ರೀ ಮಲೆದೈವಗಳ ಚಾವಡಿಯಲ್ಲಿ ಬಾಲಾಲಯ ಪ್ರತಿಷ್ಠೆ ಹಾಗೂ ಅನುಜ್ಞಾ ಕಲಶ ಕಾರ್ಯಕ್ರಮ

0


ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವರ ಕ್ಷೇತ್ರಪಾಲ ದೈವಗಳಾದ ದೇಂಗೋಡಿ ಶ್ರೀ ಮಲೆದೈವಗಳ ಚಾವಡಿಯಲ್ಲಿ ಬಾಲಾಲಯ ಪ್ರತಿಷ್ಠೆ ಹಾಗೂ ಅನುಜ್ಞಾ ಕಲಶ ಕಾರ್ಯಕ್ರಮ ಜೂ. 9 ರಂದು ನಡೆಯಲಿದೆ.
ಜೂ. ೦9 ಪೂರ್ವಾಹ್ನ 7-೦೦ರಿಂದ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಆರೋತ್ ಪದ್ಮನಾಭ ತಂತ್ರಿಗಳವರ ನೇತೃತ್ವದಲ್ಲಿ ನೆರವೇರಲಿದೆ.

ಊರ ಮತ್ತು ಪರವೂರ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ದೈವಗಳ ಕಾರ್ಯದಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿ, ಶ್ರೀ ದೈವಗಳ ಕೃಪೆಗೆ ಪಾತ್ರರಾಗಬೇಕೆಂದು ಆಡಳಿತ ಮಂಡಳಿ ತಿಳಿಸಿದೆ.