ಸುಬ್ರಹ್ಮಣ್ಯ ಸೀನಿಯರ್ ಚೇಂಬರ್ ವತಿಯಿಂದ ಕುಮಾರಧಾರ ಪರಿಸರ ಸ್ವಚ್ಛತಾ ಅಭಿಯಾನ

0


ಸುಬ್ರಹ್ಮಣ್ಯ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಲಿಜನ್ ಹಾಗೂ ಡಾl ರವಿಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ರವಿವಾರ ಕುಮಾರಧಾರ ಪರಿಸರ ಹಾಗೂ ಕುಲಕುಂದದ ವರೆಗಿನ ರಸ್ತೆ ಬದಿಗಳಲ್ಲಿ ಶೇಖರಣೆ ಗೊಂಡಿದ್ದ ಕಸ ಕಡ್ಡಿಗಳು,ಪ್ಲಾಸ್ಟಿಕ್ ಬಾಟಲುಗಳು,ಪ್ಲಾಸ್ಟಿಕ್ ಚೀಲಗಳು ಹಾಗೂ ಎಲ್ಲೆಂದರಲ್ಲಿ ಬಿಸಾಡಿದ ಇನ್ನಿತರ ತ್ಯಾಜ್ಯ ವಸ್ತುಗಳನ್ನ ಚೀಲಗಳಲ್ಲಿ ತುಂಬಿ ಅದನ್ನ ಹಿಂಜಾಡಿಯಲಿರುವ ತ್ಯಾಜ್ಯ ಸಂಗ್ರಹಣ ಘಟಕಕ್ಕೆ ಕೊಂಡೊಲಾಯಿತು.

ಈ ಸಂದರ್ಭದಲ್ಲಿ ವಿಶೇಷ ಅತಿಥಿಯಾಗಿ ಆಗಮಿಸಿದ ವೈನಾಡ್ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಪೂರ್ವ ಅಧ್ಯಕ್ಷ ಹಾಗೂ ರಾಷ್ಟ್ರೀಯ ನಿರ್ದೇಶಕರಾದ ಸೀನಿಯರ್ವಿ ಜಯಕುಮಾರ್ ಅವರು ಸುಬ್ರಹ್ಮಣ್ಯ ದಂತ ಕ್ಷೇತ್ರದಲ್ಲಿ ಇಂತಹ ಸ್ವಚ್ಛತಾ ಕಾರ್ಯಕ್ರಮಗಳನ್ನು ಪ್ರತಿ ರವಿವಾರ ಡಾlರವಿ ಕಕ್ಕೆಪದವು ಸಮಾಜ ಸೇವ ಟ್ರಸ್ಟ್ ನೊಂದಿಗೆ ಸೀನಿಯರ್ ಚೇಂಬರ್ ರವರು ಭಾಗವಹಿಸಿ ಸೇವಾ ಕಾರ್ಯವನ್ನ ಮಾಡುತ್ತಿರುವುದು ಶ್ಲಾಘನೀಯ.

ದಿನನಿತ್ಯ ಸಾವಿರಾರು ಭಕ್ತಾದಿಗಳು ಆಗಮಿಸ್ತಕ್ಕಂತ ಕ್ಷೇತ್ರ ಇದಾಗಿದೆ ಭಕ್ತಾದಿಗಳಿಗೆ ಎಷ್ಟೇ ಮಾಹಿತಿಯನ್ನು ನೀಡಿದರು ಎಲ್ಲೆಂದರಲ್ಲಿ ಬಿಸಾಡಿದ ಕಸ ಕಡ್ಡಿಗಳನ್ನ ಪ್ಲಾಸ್ಟಿಕ್ ಚೀಲಗಳು, ಬಾಟಲುಗಳು,ಹಾಗೂ ಇನ್ನಿತರ ತ್ಯಾಜ್ಯಗಳನ್ನ ನಿರಂತರವಾಗಿ ಪ್ರತಿ ರವಿವಾರ ಸ್ವಚ್ಛಗೊಳಿಸುತ್ತಿರುವುದು ಭಕ್ತಾದಿಗಳ ಆರೋಗ್ಯದ ಹಿತ ದೃಷ್ಟಿ ಹಾಗೂ ಸಾರ್ವಜನಿಕರ ಸ್ವಸ್ಥ ಹಿತದೃಷ್ಟಿಯಿಂದಲೂಉತ್ತಮ ಕಾರ್ಯ. ಇಂಥ ಪುಣ್ಯಕಾರ್ಯ ಇದು ನಿರಂತರವಾಗಿ ಇಲ್ಲಿ ನಡೆಯುತ್ತಾ ಬರಲಿ ಅವರಿಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರು ಸದಾ ಸೇವೆಯನ್ನು ಮಾಡುವಂತೆ ಕರುಣಿಸಲಿ ಎಂದು ಶುಭವನ್ನು ಹಾರೈಸಿದರು.

ಈ ಸಂದರ್ಭದಲ್ಲಿ ಸೀನಿಯರ್ ಚೇಂಬರ್ ಸುಬ್ರಹ್ಮಣ್ಯ ಲಿಜನ್ ಅಧ್ಯಕ್ಷ ಡಾlರವಿ ಕಠ್ಯಪದವು, ಸ್ಥಾಪಕ ಅಧ್ಯಕ್ಷ ವಿಶ್ವನಾಥ ನಡುತೋಟ, ನಿಯೋಜಿತ ಅಧ್ಯಕ್ಷ ಎಚ್ ಎಲ್ ವೆಂಕಟೇಶ್ ನಿಯೋಜಿತ ಕಾರ್ಯದರ್ಶಿ ಗೋಪಾಲ ಎಣ್ಣೆ ಮಜ್ಜಲ್ರ,ಕಕ್ಕೆ ಪದವ್ ಸಮಾಜ ಸೇವಾ ಟ್ರಸ್ಟ್ ನ ನಾಯಕರುಗಳಾದ ರವಿ ಕುಮಾರಧಾರ, ಜನಾರ್ದನ ಗೌಡ ಹಾಗೂ ಇನ್ನಿತರ ಸದಸ್ಯರುಗಳು ಹಾಜರಿದ್ದರು.