ಮರ್ಕಂಜದ ದಾಸರಬೈಲು ಕಿ.ಪ್ರಾ.ಶಾಲೆಯಲ್ಲಿ ಶಿಕ್ಷಕರ ಯಾರು ಇಲ್ಲದ ಕಾರಣ ಡೆಪ್ಯುಟೇಶನ್ ನೆಲೆಯಲ್ಲಿ ಶಿಕ್ಷಕರನ್ನು ನಿಯೋಜಿಸಬೇಕೆಂದು ಶಾಲಾ ಎಸ್ಡಿಂಸಿಯವರು ಮತ್ತು ನಾಯಕರುಗಳು ಹೋಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ವಿನಂತಿಸಿದ ಮೇರೆಗೆ ಅವರು ಮುಡ್ನೂರು ಮರ್ಕಂಜ ಶಾಲೆಯ ಶಿಕ್ಷಕ ಬೆಳ್ಯಪ್ಪ ಕೋಡ್ತುಗುಳಿಯವರನ್ನು ದಾಸರಬೈಲು ಶಾಲೆಗೆ ಬಿಇಒರವರು ನಿಯೋಜನೆಗೈದು ಆದೇಶ ಮಾಡಿದ್ದರು. ಆದರೆ ನಿಯೋಜನೆಗೊಂಡ ಶಿಕ್ಷಕರು ಇಂದಿನವರೆಗೆ ದಾಸರಬೈಲು ಶಾಲೆಗೆ ಹೋಗಿಲ್ಲವೆಂದು ತಿಳಿದು ಬಂದಿದೆ.















ಇಂದು ದಾಸರಬೈಲು ಶಾಲಾ ಎಸ್ಡಿಎಂಸಿಯವರು ಶಾಲೆಗೆ ಹೋಗಿ ಮಧ್ಯಾಹ್ನದವರೆಗೆ ಕಾದು ಹಿಂತಿರುಗಿದ್ದಾರೆಂದು ಎಸ್ಡಿಎಂಸಿಯ ವಿನಂತಿಯ ಮೇರೆಗೆ ಶುಭ ಟೀಚರ್ರವರು ಬಂದಿದ್ದರೆಂದು ತಿಳಿದು ಬಂದಿದೆ.
ಈ ಬಗ್ಗೆ ಬಿಇಒ ಕೃಷ್ಣಪ್ಪರನ್ನು ಸಂಪರ್ಕಿಸಿ ವಿಚಾರಿಸಿದಾಗ ನಾವು ಡೆಪ್ಯುಟೇಶನ್ಗೆ ಆದೇಶ ಮಾಡಿದ್ದೇವೆ. ಅದರ ಪಾಲನೆ ಆಗದಿದ್ದರೆ ನೋಟೀಸ್ ಮಾಡುತ್ತೇವೆ ಎಂದಿದ್ದಾರೆ.










