ತೊಡಿಕಾನ ಗ್ರಾಮದ ಜಳಕದ ಹೊಳೆಯಲ್ಲಿ ಗಿಡ ಗಂಟೆ ಬೆಳೆದು ರಸ್ತೆ ಯಲ್ಲಿ ಕೃತಕ ನೆರೆಯ ಭೀತಿ

0


ಸಹಕಾರಿ ಸಂಘ ಅಧ್ಯಕ್ಷರ ಮೂಲಕ ಗ್ರಾಮ ಪಂಚಾಯತ್ ಗೆ ಗ್ರಾಮಸ್ಥರ ಪರವಾಗಿ ಮನವಿ


ಪಂಚಾಯತ್‌ನಿಂದ ಶೀಘ್ರ ಸ್ಪಂದನೆ

ಶ್ರೀ ಮಲ್ಲಿಕಾರ್ಜುನ ಸ್ವಾಮಿ ಅಮೃಂಜನ ಸ್ನಾನ ಗುಂಡಿಯಿಂದ ತೊಡಿಕಾನ ಹಾಲಿನ ಡೈರಿವರೆಗೆ ಜಳಕ ಗುಂಡಿ ಹೊಳೆಯಲ್ಲಿ ವಿಪರೀತ ಗಿಡ ಗಂಟೆ ಗಳು ಬೆಳೆದು ಕಳೆದ ವರ್ಷ ಹೊಳೆಯ ಎರಡು ಬದಿಯಲ್ಲಿ ಹಾದು ಹೋಗುವ ಅರಂತೋಡು-ತೊಡಿಕಾನ ಪಿ.ಡಬ್ಲ್ಯೂ.ಇ ರಸ್ತೆ ಮತ್ತು ಹಾಲಿನ ಡೈರಿ ಕುಂಟುಕಾಡು ಪಂಚಾಯತ್ ರಸ್ತೆಯಲ್ಲಿ ನೀರು ಹರಿದು ಕೃತಕ ನೆರೆ ಸೃಷ್ಟಿಯಾಗಿ ವಾಹನ ಸಂಚಾರಕ್ಕೆ ಕಷ್ಟವಾಗಿದ್ದು ಈ ವರ್ಷವೂ ಮೊನ್ನೆ ಸುರಿದ ಭಾರಿ ಮಳೆಯಿಂದ ಕಳೆದ ವರ್ಷ ಸಮಸ್ಯೆ ಮರುಕಳಿಸುವ ಸಾಧ್ಯತೆ ಇದ್ದುದರಿಂದ ಅರಂತೋಡು ಸಹಕಾರಿ ಸಂಘ ಅಧ್ಯಕ್ಷರಾದ ಸಂತೋಷ್ ಕುತ್ತಮೊಟ್ಟೆಯವರು ಸಮಸ್ಯೆಯನ್ನು ಪರಿಹರಿಸುವಂತೆ ಗ್ರಾಮಸ್ಥರ ಪರವಾಗಿ ಮನವಿ ಮಾಡಿದ್ದರು.
ಸಮಸ್ಯೆಗೆ ಶೀಘ್ರದಲ್ಲಿ ಸ್ಪಂದಿಸಿದ ಅರಂತೋಡು ಗ್ರಾಮ ಪಂಚಾಯತ್ ಆಡಳಿತ ಹೊಳೆಯಲ್ಲಿ ಬೆಳೆದ ಗಿಡ ಗಂಟೆಗಳನ್ನು ತೆರವುಗೊಳಿಸಿ ಸರಾಗವಾಗಿ ನೀರು ಹರಿಯುವ ಹಾಗೆ ಮಾಡಿದೆ.