ಗುತ್ತಿಗಾರಿನ ಬ್ಲೆಸ್ಡ್ ಕುರಿಯಕೋಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಯಲ್ಲಿ ಹೊಸ ಶೈಕ್ಷಣಿಕ ವರ್ಷದ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಮತ್ತು ವಿಶ್ವ ಪರಿಸರ ದಿನಾಚರಣೆಯನ್ನು ಜೂ. 9ರಂದು ಆಚರಿಸಲಾಯಿತು.















ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ರೆವೆರೆಂಡ್ ಫಾದರ್ ಮೇಲ್ವಿನ್ ಜಾನ್ ಡಿಸೋಜಾ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಲಿಜೋ ಜೋಸ್, ಶಾಲಾ ಸಂಚಾಲಕಿ ಸಿಸ್ಟರ್ ಸಿಲ್ವಿಯ, ಶಾಲಾ ಮುಖ್ಯೋಪಾಧ್ಯಾಯನಿ ಸಿಸ್ಟರ್ ಟ್ರೀಸಾ ಜಾನ್ ಅವರು ಸಸಿ ನೀಡುವುದರ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಿದರು. ಮುಖ್ಯ ಅತಿಥಿಗಳು ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು, ರವರೆಂಡ್ ಫಾದರ್ ಮೆಲ್ವಿನ್ ಜಾನ್ ಡಿಸೋಜಾ ವಿದ್ಯಾರ್ಥಿಗಳನ್ನು ಉದ್ದೇಶಿಸಿ ವಿದ್ಯಾರ್ಥಿಗಳು ಧನಾತ್ಮಕ ಮನೋಭಾವನೆ ಮತ್ತು ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು ಎಂದು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಾಲಾ ಮುಖ್ಯ ಶಿಕ್ಷಕಿ ಟ್ರೀಸಾ ಜಾನ್ ವಿದ್ಯಾರ್ಥಿಗಳಿಗೆ
ಶುಭ ಹಾರೈಸಿದರು ಮತ್ತು ಕಳೆದ ಶೈಕ್ಷಣಿಕ ವರ್ಷದ ಹತ್ತನೇ ತರಗತಿ ವಿದ್ಯಾರ್ಥಿಗಳ ಶೇ.100 ಫಲಿತಾಂಶಕ್ಕೆ ಶ್ರಮಪಟ್ಟ ವಿದ್ಯಾರ್ಥಿಗಳನ್ನು ಮತ್ತು ಶಿಕ್ಷಕರನ್ನು ಅಭಿನಂದಿಸಿದರು. ಹಾಗೂ ಹೊಸ ಶಿಕ್ಷಕರನ್ನು ಸ್ವಾಗತಿಸಿದರು. ಶೈಕ್ಷಣಿಕ ವರ್ಷಕ್ಕೆ ದಾಖಲಾದ ನೂತನ ವಿದ್ಯಾರ್ಥಿಗಳಿಗೆ ಪುಷ್ಪ ನೀಡಿ ಸ್ವಾಗತಿಸಲಾಯಿತು.
10ನೇ ತರಗತಿಯ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಶಿಕ್ಷಕಿ ಸ್ವಾತಿ ಸ್ವಾಗತಿಸಿ, ಶಿಕ್ಷಕರಾದ ರಜನೀಶ್ ವಂದಿಸಿ, ಶಿಕ್ಷಕಿಯರಾದ ವಸಂತ ಮಾಲಾ ಮತ್ತು ಜೋತ್ಸ್ನಾ ರವರು ಕಾರ್ಯಕ್ರಮವನ್ನು ನಿರೂಪಿಸಿದರು.










