ಆದಿದ್ರಾವಿಡ ಯುವ ವೇದಿಕೆ ವತಿಯಿಂದ ಬಡ ಶಾಲಾ ಮಕ್ಕಳಿಗೆ ಪುಸ್ತಕ ಬ್ಯಾಗ್ ವಿತರಣೆ

0

ಆದಿದ್ರಾವಿಡ ಯುವ ವೇದಿಕೆ ದ. ಕ ಹಾಗೂ ಸುಳ್ಯ ತಾಲೂಕು ಸಮಿತಿ ಮಹಿಳಾ ಸಮಿತಿ ಹಾಗೂ ಗ್ರಾಮ ಘಟ ಸಮಿತಿಗಳ ನೇತೃತ್ವದಲ್ಲಿ ಹಾಗೂ ದಾನಿಗಳ ಸಹಕಾರದೊಂದಿಗೆ ಬಡ ತಂದೆ ತಾಯಿ ಇಲ್ಲದ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಮಕ್ಕಳಿಗೆ ಪುಸ್ತಕ ಹಾಗೂ ಬ್ಯಾಗ್ ವಿತರಣೆಯ ಕಾಯ೯ಕ್ರಮವನ್ನು ಸುಳ್ಯದ ಸಂದ್ಯಾರಶ್ಮಿ ಸಭಾಂಗಣದಲ್ಲಿ ನೆರವೇರಿಸಲಾಯಿತು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಆದಿದ್ರಾವಿಡ ಯುವ ವೇದಿಕೆಯ ಜಿಲ್ಲಾಧ್ಯಕ್ಷರಾದ ಸುಂದರ ಅಡ್ಪಂಗಾಯ ವಹಿಸಿದ್ದರು.

ಅಥಿತಿಗಳಾಗಿ ಮೋನಪ್ಪ ಮಡಿವಾಳಮೂಲೆ, ಶ್ರೀಮತಿ ವಸಂತಿ ಮುಳ್ಯಕಜೆ, ರಮೇಶ್ ಅಡ್ಕಾರ್, ಜನಾರ್ಧನ ಉಬರಡ್ಕ , ಸತೀಶ್ ಬಿಳಿಯಾರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಚಂದ್ರಶೇಖರ ಮೊರಂಗಲ್ಲು ಸ್ವಾಗತಿಸಿ ರಮೇಶ್ ಬೂಡು ವಂದನಾಪ೯ನೆ ಮಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಶಶಿಕಾಂತ್ ಮುಳ್ಯಕಜೆ ಮಾಡಿದರು. ಶಾಲಾ ಮಕ್ಕಳು , ಮಕ್ಕಳ ಪೋಷಕರು, ಆದಿದ್ರಾವಿಡ ಯುವ ವೇದಿಕೆಯ ಪಧಾಧಿಕಾರಿಗಳು, ಸದಸ್ಯರು ಹಿತೈಷಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.