ಮಳೆ ಬಂದರೆ ಜಾಲ್ಸೂರು‌ ಮುಖ್ಯ ರಸ್ತೆಯೇ ಹೊಳೆಯಂತಾಗುತ್ತಿದೆ….!

0

ವಾಹನ ಸವಾರರಿಗೆ ಸಂಕಷ್ಟ : ಗ್ರಾ.ಪಂ., ಇಲಾಖೆಯವರು ಸಮಸ್ಯೆ ಸರಿಪಡಿಸುವಿರಾ?

ಮಳೆ ಬಂತೆಂದರೆ ರಸ್ತೆಗೆ ಬಿದ್ದ ನೀರು‌ ಚರಂಡಿಯಲ್ಲಿ ಹರಿಯದೇ ರಸ್ತೆಯಲ್ಲೇ ನಿಂತು ಹೊಳೆಯಂತಾಗುವ ಸ್ಥಿತಿ ಅಲ್ಲಲ್ಲಿ ಕಾಣುತ್ತೇವೆ. ಇದಕ್ಕೆ ಉದಾಹರಣೆ ಎಂಬಂತೆ ಜಾಲ್ಸೂರು ಪೇಟೆಯಲ್ಲಿ ಮುಖ್ಯ ರಸ್ತೆಯಲ್ಲೇ ನೀರು ನಿಂತು‌ ಸಂಕಷ್ಟ ಎದುರಾಗಿದೆ.

ಮಳೆ ನೀರು ಹರಿದು ಹೋಗಲು ಜಾಗವಿಲ್ಲದೇ ರಸ್ತೆಯಲ್ಲೇ ನಿಲ್ಲುತ್ತಿದೆ.‌ ಈ ಕುರಿತು ಸಂಬಂಧಿಸಿದ ಇಲಾಖೆಯವರು ಗಮನ ಹರಿಸಿ ಸಮಸ್ಯೆ ಪರಿಹರಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.