ಮಡಪ್ಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ನಿರ್ದೇಶಕ, ವಾಲ್ತಾಜೆ ಮನೆತನದ ಹಿರಿಯರಾದ ಚೆನ್ನಕೇಶವ ಗೌಡ ವಾಲ್ತಾಜೆಯವರು ಅಲ್ಪ ಕಾಲದ ಅಸೌಖ್ಯದಿಂದ ಜೂ.11 ರಂದು ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 78 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಶ್ರೀಮತಿ ಮೋಹನಾಂಗಿ, ಪುತ್ರರಾದ ಮಡಪ್ಪಾಡಿ ಸೊಸೈಟಿಯ ಮಾಜಿ ನಿರ್ದೇಶಕ ಅಜಯ್ ವಾಲ್ತಾಜೆ, ಸುಳ್ಯ ರಬ್ಬರ್ ಸೊಸೈಟಿ ಉದ್ಯೋಗಿ ವಿಜಯ್ ವಾಲ್ತಾಜೆ, ಪುತ್ರಿ ಶ್ರೀಮತಿ ವಾಹಿನಿ ಯತೀಂದ್ರ ಕೊಚ್ಚಿ,ಸೊಸೆಯಂದಿರಾದ ಶ್ರೀಮತಿ ಹೇಮಶ್ರೀ, ಶ್ರೀಮತಿ ಶರ್ಮಿಳಾ ಹಾಗೂ ಮೊಮ್ಮಕ್ಕಳನ್ನು, ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರು ಪ್ರಸ್ತುತ ವಾಲ್ತಾಜೆ ಕುಟುಂಬದ ಯಜಮಾನರಾಗಿದ್ದರು.
ಮೃತರ ಅಂತ್ಯ ಸಂಸ್ಕಾರ ಕಾರ್ಯಕ್ರಮವು ಜೂ.12 ರಂದು ಬೆಳಗ್ಗೆ 10.00 ಗಂಟೆಗೆ ಹಾಡಿಕಲ್ಲು ವಾಲ್ತಾಜೆ ಸ್ವಗೃಹದಲ್ಲಿ ನಡೆಸುವುದಾಗಿ ಮನೆಯವರು ತಿಳಿಸಿರುತ್ತಾರೆ.

























