ಕೊಡಗು ಸಂಪಾಜೆ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ ಕೆಸಿಸಿ ಸಾಲ ಕುರಿತು ಮಾಹಿತಿ ಕಾರ್ಯಾಗಾರ

0

ಕೊಡಗು ಸಂಪಾಜೆ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ ಸಂಘದ ಸದಸ್ಯರಿಗೆ ಸಿಗುತ್ತಿರುವ ಶೂನ್ಯ ಬಡ್ಡಿದರದ ಕೆಸಿಸಿ ಸಾಲದ ಬಗ್ಗೆ ಮಾಹಿತಿ ಕಾರ್ಯಾಗಾರವು ಜೂ.10 ರಂದು ಸಂಪಾಜೆಯಲ್ಲಿ ಹಾಗೂ ಜೂ.11 ರಂದು ಬಾಲಂಬಿಯಲ್ಲಿ
ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಪ್ರಾ. ಕೃ. ಪ. ಸ ಸಂಘದ ಅಧ್ಯಕ್ಷ . ಯನ್.ಸಿ.ಅನಂತ್ ಊರುಬೈಲು ವಹಿಸಿದರು. ಬಳಿಕ ಕೆಸಿಸಿ ಸಾಲದ ವ್ಯವಸ್ಥೆ ಬಗ್ಗೆ ವಿಸ್ತೃತವಾದ ಮಾಹಿತಿ ನೀಡಿ,ಸಾಲ ಪಡೆಯಲು ನಿಗದಿಪಡಿಸಿದ ಮಾನದಂಡಗಳು ಮತ್ತು ಅನುಸರಿಸಬೇಕಾದ ನಿಯಮಗಳು ಮತ್ತು ಕೆಸಿಸಿ ಸಾಲ ವಿತರಣೆಯಲ್ಲಿ ಸಂಘದ ಪಾತ್ರದ ಬಗ್ಗೆ ವಿವರಿಸಿದರು.
ಕೊಡಗು ಜಿಲ್ಲಾ ಕೇಂದ್ರ ಬ್ಯಾಂಕ್ ನ ಅಧಿಕಾರಿ ಹರೀಶ್ ಮಾತನಾಡಿ ಕೆಸಿಸಿ ಸಾಲದಲ್ಲಿ ಕೆಡಿಸಿಸಿ ಬ್ಯಾಂಕಿನ ಪಾತ್ರ ಮತ್ತು ಸಾಲಕ್ಕೆ ಆಧಾರವಾಗಿ ರೈತರು ತಮ್ಮ ಭೂಹಿಡುವಳಿಗಳನ್ನು ಸಾಮಾನ್ಯ ಅಡಮಾನ ಮಾಡುವ ಅನಿವಾರ್ಯತೆ ಬಗ್ಗೆ ವಿವರಿಸಿದರು.
ವೇದಿಕೆಯಲ್ಲಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಕೆ.ಆನಂದ , ಸಂಪಾಜೆ ಗ್ರಾ ಪಂ ಅಧ್ಯಕ್ಷೆ ಶ್ರೀಮತಿ ರಮಾದೇವಿ ಬಾಲಚಂದ್ರ ಕಳಗಿ ನಿರ್ದೇಶಕರು , ಸದಸ್ಯರು ಉಪಸ್ಥಿತರಿದ್ದರು . ಜೂನ್ 11 ರಂದು ಬಾಲಂಬಿಯಲ್ಲಿ ನಡೆದ ಸಭೆಯಲ್ಲಿ , ಚೆಂಬು ಗ್ರಾ .ಪಂ ಅಧ್ಯಕ್ಷ ತೀರ್ಥರಾಮ ಪೂಜಾರಿಗದ್ದೆ ,ಮಾಜಿ ಎಪಿಎಂಸಿ ಅಧ್ಯಕ್ಷ ಸುಬ್ರಹ್ಮಣ್ಯ ಉಪಾಧ್ಯಾಯರು , ಆದಂ ಸೆಂಟ್ಯಾರು ಸೇರಿದಂತೆ ಸಂಘದ ನಿರ್ದೇಶಕರು, ಸದಸ್ಯರು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕೆಸಿಸಿ ಸಾಲ ವಿತರಣೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡರು. ಸಂಘದ ಉಪಾಧ್ಯಕ್ಷ ಯಶವಂತ ದೇವರಗುಂಡ ಸರ್ವರನ್ನೂ ಸ್ವಾಗತಿಸಿ ,ಕೊನೆಯಲ್ಲಿ ವಂದಿಸಿದರು.