ಕಳಂಜದ ಪಟ್ಟೆ ಬಳಿಯ ಶ್ರೀ ಭಾರತೀ ಸೇವಾ ಸಮಿತಿ ಕಳಂಜ ಇದರ ವತಿಯಿಂದ ನಡೆಸಲ್ಪಡುವ ಶ್ರೀ ವಿಧ್ಯಾನಿಕೇತನ ಶಿಶುಮಂದಿರದ ಪ್ರಾರಂಭೋತ್ಸವ ಜೂ. 11ರಂದು ನಡೆಯಿತು.
ಈ ಸಂಧರ್ಬದಲ್ಲಿ ಆರತಿ ಬೆಳಗುವ ಮೂಲಕ ಶಿಶುಮಂದಿರದ ಮಕ್ಕಳನ್ನು ಬರಮಾಡಿ ಕೊಂಡು ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಷಾರ್ಚಾನೆ ನಡೆಸಲಾಯಿತು.















ಈ ಸಂಧರ್ಭದಲ್ಲಿ ವಿಭಾಗದ ಸಹಕಾರ್ಯವಾಹರಾದ ಸುಭಾಶ್ಚಂದ್ರ ಕಳಂಜ ಶುಭ ಹಾರೈಸಿದರು. ಶ್ರೀ ಭಾರತೀ ಸೇವಾ ಸಮಿತಿ ಅಧ್ಯಕ್ಷ ರವಿಪ್ರಸಾದ್ ರೈ ಕಳಂಜ ಸ್ವಾಗತಿಸಿ, ಕಾರ್ಯದರ್ಶಿ ಅಜೇಯ್ ಆದಾಳ ವಂದಿಸಿದರು. ಈ ಸಂಧರ್ಭದಲ್ಲಿ ಮಾತಾಜಿ ಅಕ್ಷತಾ ಕಳಂಜ ಮತ್ತು ಸಹಾಯಕಿ ಪುಷ್ಪಲತಾ ಕುಕ್ಕುತ್ತಡಿ ಉಪಸ್ಥಿತರಿದ್ದರು.
ಬೆಳಿಗ್ಗೆಯಿಂದ ಸಂಜೆ ತನಕ ಶಿಶುಮಂದಿರದಲ್ಲಿ ಅಕ್ಷರಾಭ್ಯಾಸ ನಡೆಯಲಿದ್ದು, ಮಧ್ಯಾಹ್ನ ಊಟದ ವ್ಯವಸ್ಥೆ ಪ್ರಾರಂಭಿಸಲಾಯಿತು.










