ಕರ್ನಾಟಕ ಸರಕಾರ , ದ.ಕ ಜಿಲ್ಲಾ ಪಂಚಾಯತ್ ಮಂಗಳೂರು,ಪಶುಪಾಲನ & ಪಶು ವೈದ್ಯಕೀಯ ಸೇವಾ ಇಲಾಖೆ ಇದರ ವತಿಯಿಂದ ಗ್ರಾಮ ಪಂಚಾಯತ್ ಪಂಜ & ಪಂಜ ಹಾಲು ಉತ್ಪಾದಕರ ಸಹಕಾರಿ ಸಂಘ ನಿ. ಇದರ ಸಹಯೋಗದೊಂದಿಗೆ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ 7 ನೇ ಸುತ್ತಿನ ಉಚಿತ ಕಾಲು ಬಾಯಿ ರೋಗ ಮತ್ತು ಚರ್ಮಗಂಟು ಲಸಿಕಾ ಅಭಿಯಾನ
ಜೂ 10 ರಂದು ಜರುಗಿತು .

ಲಸಿಕೆದಾರರು ಐವತ್ತೊಕ್ಲು ಮತ್ತು ಕೂತ್ಕುಂಜ ಗ್ರಾಮದಲ್ಲಿ ಜಾನುವಾರುಗಳಿಗೆ ಲಸಿಕೆ ನೀಡಿದರು.















ಮುಂಜಾನೆ ಪಂಜ ಗ್ರಾಮ ಪಂಚಾಯತ್ ನಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮೀ ಜಳಕದಹೊಳೆ,ಉಪಾಧ್ಯಕ್ಷ ನಾರಾಯಣ ಕೃಷ್ಣನಗರ, ಸದಸ್ಯ ಚಂದ್ರಶೇಖರ ದೇರಾಜೆ,ಪಶು ವೈದ್ಯಾಧಿಕಾರಿ ಡಾ.ಸೂರ್ಯ ನಾರಾಯಣ ಭಟ್, ಪಂಜ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಭಾಸ್ಕರ ನಾಯಕ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆದರ್ಶ ಚಿದ್ಗಲ್ಲು, ಸಂಘದ ನಿರ್ದೇಶಕರಾದ ಗಣೇಶ್ ಪಾಲೋಳಿ, ಪೆರ್ಗಡೆ ಕಾಣಿಕೆ, ಸಿಬ್ಬಂದಿ ಪದ್ಮಯ್ಯ ಕೆಮ್ಮೂರು,ಜಾ.ಕೃ.ಗ.ಕಾರ್ಯಕರ್ತ ಕೇಶವ ಭಟ್ ಚೀಮುಳ್ಳು, ಪಶು ಸಖಿಯರಾದ ಯಶೋಧ ಬೆಳ್ಳಾರೆ, ಪ್ರತಿಮಾ ಬೆಳ್ಳಾರೆ, ಗೀತಾ ಮುರುಳ್ಯ, ಪದ್ಮಾವತಿ ಕಲ್ಮಡ್ಕ, ಮೀನಾಕ್ಷಿ ಪಂಜ, ಪಶು ಇಲಾಖೆಯ ನೌಕರರಾದ ನಾರಾಯಣ ಮೊದಲಾದವರು ಉಪಸ್ಥಿತರಿದ್ದರು.










