ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಜೊತೆಯಾಗಿ ಕೆಲಸ ಮಾಡಿದಾಗ ಸರಕಾರದ ಯೋಜನೆಗಳು ಯಶಸ್ವಿ – ಭರತ್ ಮುಂಡೋಡಿ
ಕಡಬ ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ನೋಂದಾವಣೆ ಬಾಕಿ ಇರುವ ಮತ್ತು ತಿರಸ್ಕೃತ ಅರ್ಜಿಗಳ ವಿಲೇವಾರಿ ಶಿಬಿರವು ಜೂ.12 ರಂದು ಕುಕ್ಕೆ ಸುಬ್ರಹ್ಮಣ್ಯದ ವಲ್ಲೀಶ ಸಭಾಭವನದಲ್ಲಿ ನಡೆಯಿತು.

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಬಳಿಕ ಮಾತನಾಡಿ ಸರಕಾರವು ಪಂಚಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ಜನರನ್ನು ಆರ್ಥಿಕವಾಗಿ ಸದೃಢರನ್ನಾಗಿಸಿದೆ.ಹೊಸ ಯೋಜನೆಗಳ ಅನುಷ್ಟಾನ ಆಗಿದೆ.
ಇಷ್ಟು ದೊಡ್ಡ ಯೋಜನೆಗಳು ದೇಶದಲ್ಲೇ ಇಲ್ಲ.ರಾಜ್ಯ ಸರಕಾರದಲ್ಲಿ ಮಾತ್ರ ಇದೆ.ಜನಪ್ರತಿನಿಧಿಗಳು ಅಧಿಕಾರಿಗಳು ಜೊತೆಯಾಗಿ ಕೆಲಸ ಮಾಡಿದಾಗ ಮಾತ್ರ ಯೋಜನೆಗಳ ಸರಿಯಾದ ಅನುಷ್ಠಾನ ಸಾಧ್ಯ.ಇದು ಇಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದರು.

ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿಯವರು ಮಾತನಾಡಿ ಸರಕಾರ ನುಡಿದಂತೆ ನಡೆದಿದೆ.ಇದು ಅರ್ಥಪೂರ್ಣ ಕಾರ್ಯಕ್ರಮ.ಅರ್ಹರಿಗೆ ಎಲ್ಲರಿಗೂ ಪಂಚ ಗ್ಯಾರಂಟಿ ಯೋಜನೆಗಳು ಸಿಕ್ಕಿವೆ.ವಿರೋಧ ಪಕ್ಷದವರು ಟೀಕೆಗಳನ್ನು ಮಾಡುತ್ತಾರೆ.ಆದರೆ ಇಷ್ಟು ಯೋಜನೆಗಳನ್ನು ಯಾರೂ ಕೂಡ ಕೊಡಲು ಸಾಧ್ಯವಿಲ್ಲ. ಅದರೆ ಕಾಂಗ್ರೆಸ್ ಸರಕಾರ ಕೊಟ್ಟಿದೆ.ಇದರ ಸದುಪಯೋಗವನ್ನು ಎಲ್ಲಾ ಅರ್ಹ ಫಲಾನುಭವಿಗಳು ಪಡೆದುಕೊಳ್ಳಬೇಕು ಎಂದು ಹೇಳಿದರು.















ಕಡಬ ತಾಲೂಕು ಗ್ರಾರಂಟಿ ಸಮಿತಿ ಅಧ್ಯಕ್ಷ ಸುದೀರ್ ಕುಮಾರ್ ಶೆಟ್ಟಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು ಹಸಿವು ಮುಕ್ತ ರಾಜ್ಯ ಆಗಬೇಕು.ಮಹಿಳೆಯರು ಸ್ವಾಭಿಮಾನದಿಂದ ಜೀವನ ಮಾಡಬೇಕು ಎನ್ನುವ ಉದ್ದೇಶದಿಂದ ರಾಜ್ಯ ಸರಕಾರ ಪಂಚಗ್ಯಾರಂಟಿ ಯೋಜನೆಗಳನ್ನು ಅನುಷ್ಟಾನ ಮಾಡಿದೆ. ಉದ್ಯೋಗದಿಂದ ವಂಚಿತರಾದವರಿಗೆ ಯುವ ನಿಧಿಯನ್ನು ಪ್ರಾರಂಭ ಮಾಡಲಾಗಿದೆ.ಈ ಶಿಬಿರದಿಂದ ಎಲ್ಲರೂ ಗ್ಯಾರಂಟಿ ಯೋಜನೆಗಳ ಪ್ರಯೋಜನ ಪಡೆಯಬೇಕು ಎಂದು ಹೇಳಿದರು.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸಸ್ಥಾನದ ವ್ಯ.ಸ.ಅಧ್ಯಕ್ಷ,ಸದಸ್ಯರುಗಳಿಗೆ ಸನ್ಮಾನ
ಪಂಚಗ್ಯಾರಂಟಿ ಅನುಷ್ಟಾನ ಸಮಿತಿ ಕಡಬ ವತಿಯಿಂದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ,ಸದಸ್ಯರಾದ ಅಶೋಕ್ ನೆಕ್ರಾಜೆ, ಅಜಿತ್ ಕುಮಾರ್ ಪಾಲೇರಿ, ಶ್ರೀಮತಿ ಲೀಲಾ ಮನಮೋಹನ್, ಶ್ರೀಮತಿ ಪ್ರವೀಣ ರೈ ಮರುವಂಜ, ಶ್ರೀಮತಿ ಸೌಮ್ಯ ಭರತ್ ರವರನ್ನು ಶಾಲು ಹೊದಿಸಿ ಫಲ,ಪುಷ್ಪ,ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಕಡಬ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿವರು ಪ್ರಾಸ್ತಾವಿಕ ಮಾತನಾಡಿದರು.

ವೇದಿಕೆಯಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ಶೈಲಜಾ,ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುಜಾತ,ಬಳ್ಪ ಗ್ರಾಮ ಪಂಚಾಯತ್ ಅಧ್ಯಕ್ಷ ಹರ್ಷಿತ್ ಕಾರ್ಜಾ, ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಸದಸ್ಯರಾದ ಎ.ಕೆ.ಬಶೀರ್, ಹನೀಫ್ ಕೆ.ಎಂ.,ಸತೀಶ್ ಪಿ.,ಶ್ರೀಮತಿ ಗೌರಿ ಕೆ, ಅವಿನಾಶ್,ಶ್ರೀಮತಿ ಹರಿಣಾಕ್ಷಿ,ಶ್ರೀಮತಿ ಉಷಾ ಅಂಚನ್, ದೀಕ್ಷಿತ್ ,ರಾಘವೇಂದ್ರ,ಜಗದೀಶ್ ಗಂಗಾಧರ ಶೆಟ್ಟಿ,ಭವಾನಿಶಂಕರ್,ಮಾಧವ ಪೂಜಾರಿ, ಸೈಮನ್ ಸಿ.ಜೆ , ಮೆಸ್ಕಾಂ ಇಲಾಖೆಯ ಸತೀಶ್, ಶಕ್ತಿ ಯೋಜನೆಯ ಅಚ್ಚುತ ಭಟ್,ಅನ್ನಭಾಗ್ಯ ಯೋಜನೆಯ ಶಂಕರ್ ,ಕೌಶಲ್ಯ ಅಭಿವೃದ್ಧಿ ಇಲಾಖೆಯ ಮಂಜೂಷಾ ಉಪಸ್ಥಿತರಿದ್ದರು.
ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಪಿಡಿಒ ಮಹೇಶ್ ಸ್ವಾಗತಿಸಿ,ಕಡಬ ತಾಲೂಕು ಪಂಚಾಯತ್ ಐಇಸಿ ಸಂಯೋಜಕ ಭರತ್ ರಾಜ್ ಕಾರ್ಯಕ್ರಮ ನಿರೂಪಿಸಿ,ಗಂಗಾಧರ ಶೆಟ್ಟಿ ವಂದಿಸಿದರು.
ಪಂಚ ಗ್ಯಾರಂಟಿ ಯೋಜನೆಗಳ ಐದು ಕಡೆಗಳಲ್ಲಿ ಕೌಂಟರ್ ಮಾಡಲಾಗಿತ್ತು. ಫಲಾನುಭವಿಗಳ ನೋಂದಾವಣೆ ಮತ್ತು ತಿರಸ್ಕೃತ ಅರ್ಜಿಗಳ ವಿಲೇವಾರಿ ನಡೆಯಿತು.
ಬಳ್ಪ ಮತ್ತು ಸುಬ್ರಹ್ಮಣ್ಯ ಗ್ರಾಮ ವ್ಯಾಪ್ತಿಯ ಜನರು ಇದರ ಸದುಪಯೋಗ ಪಡೆದುಕೊಂಡರು.










