ಅಹಮದಾಬಾದ್ ವಿಮಾನ ದುರಂತ : ಆರ್.ಕೆ.ನಾಯರ್ ಸಂತಾಪ

0

ಅಹಮದಾಬಾದ್ ನಲ್ಲಿ ಇಂದು‌ ವಿಮಾನ ಪತನವಾಗಿ ಸಂಭವಿಸಿದ ದುರಂತದಲ್ಲಿ 130 ಕ್ಕೂ ಹೆಚ್ಚು ಬಲಿಯಾಗಿರುವ ಘಟನೆಗೆ ದಿಗ್ಭ್ರಮೆ ವ್ಯಕ್ತಪಡಿಸಿರುವ ಗ್ರೀನ್ ಹೀರೋ ಆಪ್ ಇಂಡಿಯಾ ಡಾ. ಆರ್. ಕೆ. ನಾಯರ್ ಅವರು ದುರಂತದಲ್ಲಿ ಮಡಿದವರಿಗಾಗಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಡಾ. ಆರ್. ಕೆ. ನಾಯರ್ ಅವರು ತನ್ನ ಕ್ಷೇತ್ರ ಕಾರ್ಯಗಳಿಗಾಗಿ ಹೆಚ್ಚಾಗಿ ಪ್ರತಿ ನಿತ್ಯ ವಿಮಾನ ಯಾನ ನಡೆಸುತ್ತಿದ್ದು ಈ ದುರಂತದ ಹಿನ್ನೆಲೆಯಲ್ಲಿ ನೂರಾರು ಮಂದಿ ಅವರಿಗೆ ಫೋನ್ ಮಾಡಿ ವಿಚಾರಿಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಮುಂಬೈಯಿಂದ ಸುದ್ದಿಯೊಂದಿಗೆ ಮಾತನಾಡಿದ ಡಾ. ನಾಯರ್ ಅವರು, ” ನಾವೆಲ್ಲಾ ಸುರಕ್ಷಿತರಾಗಿದ್ದೇವೆ. ಆದರೆ ಈ ಘಟನೆಯಲ್ಲಿ ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸೇರಿದಂತೆ ಕೆಲವು ಆತ್ಮೀಯರು ಕೂಡಾ ಈ ಪತನಗೊಂಡ ವಿಮಾನದಲ್ಲಿದ್ದರು ಎಂದರು