ಡಾ. ಬಿ. ಪ್ರಭಾಕರ ಶಿಶಿಲರ ಚಿದಗ್ನಿ ಕಾದಂಬರಿ ಮಲೆಯಾಳಂನಲ್ಲಿ ಪ್ರಕಟ

0

ಹಿರಿಯ ಸಾಹಿತಿ ವಿದ್ವಾಂಸ ಡಾ. ಬಿ. ಪ್ರಭಾಕರ ಶಿಶಿಲ ಲಲಿತಾ ಸಹಸ್ರನಾಮವನ್ನು ಆಧಾರವಾಗಿಸಿ ರಚಿಸಿದ ವಿಶಿಷ್ಟ ಕಾದಂಬರಿ ಮಲೆಯಾಳಂನಲ್ಲಿ ಪ್ರಕಟವಾಗಿ ಬಿಡುಗಡೆಗೊಂಡಿದೆ.

ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪ್ರಶಸ್ತಿ ಪಡೆದ ಕನ್ನಡ ಮಲೆಯಾಳಂ ಉಭಯ ಭಾಷಾ ತಜ್ಞ ಕೆ.ವಿ. ಕುಮಾರನ್ ಚಿದಗ್ನಿಯನ್ನು ಮಲೆಯಾಳಂಗೆ ಅನುವಾದಿಸಿದ್ದು, ತಿರುವನಂತಪುರದ ಸಾಹಿತ್ಯ ಪ್ರವರ್ತಕ ಸಹಕರಣ ಸಂಘ ಪ್ರಕಟಿಸಿದೆ.

ಸಂಘವು ತನ್ನ ಹುಟ್ಟಿನ ೮೦ನೆಯ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸ್ಪರ್ಧೆ ನಡೆಸಿ ೮೦ ಕೃತಿಗಳನ್ನು ಆಯ್ದು ಪ್ರಕಟಿಸಿದ್ದು, ಚಿದಗ್ನಿ ಅವುಗಳ ಪೈಕಿ ಪ್ರಥಮ ಸ್ಥಾನಕ್ಕೆ ಭಾಜನವಾಗಿದೆ.

ಆಧ್ಯಾತ್ಮಿಕ ಸಾಧನೆ ಮಾಡ ಹೋದ ವ್ಯಕ್ತಿಯೊಬ್ಬನ ಬಗ್ಗೆ ಹೆಣೆಯಲಾದ ಈ ಕಾದಂಬರಿಯನ್ನು ಕನ್ನಡದಲ್ಲಿ  ಧಾರವಾಡದ ಮನೋಹರ ಪುಸ್ತಕ ಮಾಲೆಯವರು ೨೦೨೨ರಲ್ಲಿ ಪ್ರಕಟಿಸಿದ್ದು, ಕೃತಿಯ ಎರಡನೇ ಆವೃತ್ತಿ ಶೀಘ್ರ ಹೊರಬರಲಿದೆ.