ಚಿನ್ನಪ್ಪ ಗೌಡ ಶೀರಡ್ಕರವರಿಗೆ ಶ್ರದ್ಧಾಂಜಲಿ – ವೈಕುಂಠ ಸಮಾರಾಧನೆ

0

ಮಡಪ್ಪಾಡಿ ಗ್ರಾಮದ ಶೀರಡ್ಕ ಚಿನ್ನಪ್ಪ ಗೌಡರು ಮೇ.26 ರಂದು ನಿಧನರಾಗಿದ್ದು ಅವರಿಗೆ ಶ್ರದ್ಧಾಂಜಲಿ ಮತ್ತು ವೈಕುಂಠ ಸಮಾರಾಧನೆಯು ಜೂ.10 ರಂದು ಮಡಪ್ಪಾಡಿ ಯುವಕ ಮಂಡಲದ ಸಭಾಭವನದಲ್ಲಿ ನಡೆಯಿತು. ಪಿ.ಸಿ.ಜಯರಾಮ ಮಡಪ್ಪಾಡಿ ಮತ್ತು ವಿನಯ ಮುಳುಗಾಡುರವರು ದಿ.ಚಿನ್ನಪ್ಪ ಗೌಡ ಶೀರಡ್ಕರವರ ಆದರ್ಶ ಗುಣಗಳ ಬಗ್ಗೆ ಗುಣಗಾನಗೈದು ನುಡಿನಮನ ಸಲ್ಲಿಸಿದರು. ಆಗಮಿಸಿದ ನೂರಾರು ಜನರು ಚಿನ್ನಪ್ಪ ಗೌಡರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ಈ ಸಂದರ್ಭದಲ್ಲಿ ಪುತ್ರರಾದ ಲೋಕಪ್ಪ ಗೌಡ ಶೀರಡ್ಕ, ಜಯಂತ ಗೌಡ ಶೀರಡ್ಕ, ಪುತ್ರಿಯರಾದ ಶ್ರೀಮತಿ ರೇವತಿ ಭಾಸ್ಕರ ಕಲ್ಲುಗದ್ದೆ, ಶ್ರೀಮತಿ ಗೀತಾ ಶ್ರೀಧರ ಮೂರ್ಜೆ ಸೊಸೆಯಂದಿರಾದ ಶ್ರೀಮತಿ ಹೇಮ, ಶ್ರೀಮತಿ ಕಮಲಾವತಿ, ಮೊಮ್ಮಕ್ಕಳಾದ ಸುಪ್ರಿತ್ ಗೌಡ ಶೀರಡ್ಕ, ಶ್ರೀಮತಿ ರಚಿತಾ ಸುಪ್ರಿತ್, ಸುಮಂತ್ ಗೌಡ ಶೀರಡ್ಕ, ದುಶ್ಯಂತ್ ಗೌಡ ಶೀರಡ್ಕ, ರಕ್ಷಿತ್ ಗೌಡ ಶೀರಡ್ಕ ,ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು