ತೋಟಗಾರಿಕ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟೆಯ 14ನೇ ಘಟಿಕೋತ್ಸವದಲ್ಲಿ ಸುಪ್ರೀತಾ ಮೇಲಡ್ತಲೆರವರಿಗೆ ಡಾಕ್ಟರೇಟ್ ಪದವಿ

0

ಅರುಣಾಚಲ ಪ್ರದೇಶದ ದಿರಾಂಗ್‌ನಲ್ಲಿ ಕೃಷಿ ವಿಜ್ಞಾನಿಯಾಗಿ ಸೇವೆ ಸಲ್ಲಿಸುತ್ತಿರುವ ಸುಪ್ರೀತಾ ಬಿ.ಜಿ. ಮೇಲಡ್ತಲೆರವರಿಗೆ ತೋಟಗಾರಿಕ ವಿಜ್ಞಾನಗಳ ವಿಶ್ವವಿದ್ಯಾಲಯದ ಬಾಗಲಕೋಟೆಯ 14ನೇ ಘಟಿಕೋತ್ಸವದಲ್ಲಿ ಕರ್ನಾಟಕದ ಗವರ್ನರ್ ಥಾವರ್ ಚಂದ್ ಗೆಹ್ಲೋಟ್ ರಿಂದ ಹಣ್ಣು ವಿಜ್ಞಾನ ವಿಭಾಗದಲ್ಲಿ ಡಾಕ್ಟರೇಟ್ ಪದವಿ ಸ್ವೀಕರಿಸಿದ್ದಾರೆ.

ಇವರು ಕೊಯನಾಡು ಕಲ್ಲಾಳ ಗ್ರಾಮದ ಬಲ್ಯಮನೆ ವಿಮಲ ಮತ್ತು ಗಣಪತಿ ದಂಪತಿಗಳ ಪುತ್ರಿ. ಮೇಲಡ್ತಲೆ ಶರತ್‌ರವರ ಪತ್ನಿ.

ಸುಪ್ರಿತ ರವರು ಎಂಎಸ್ಸಿ ಫ್ರೂಟ್ ಸೈನ್ಸ್ ಕಲಿಕೆಯನ್ನು ಪಂಜಾಬ್‌ನ ಲೂದಿಯಾನದಲ್ಲಿರುವ ಕೃಷಿ ವಿಶ್ವವಿದ್ಯಾಲಯದಲ್ಲಿ ಪೂರೈಸಿದ್ದು, ಚಿನ್ನದ ಪದಕ ಪಡೆದಿರುತ್ತಾರೆ.