ಹಾಲೆಮಜಲು: ನಿವೃತ್ತ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಂತಿ ಅವರಿಗೆ. ಬೀಳ್ಕೊಡುಗೆ ಸಮಾರಂಭ.

0

.ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಲೆಮಜಲು ಇಲ್ಲಿ ಕಳೆದ 5 ವರುಷಗಳಿಂದ ಶಾಲಾ ಮುಖ್ಯ ಗುರುಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀಮತಿ ಜಯಂತಿಯವರು ಸೇವಾ ನಿವೃತ್ತಿಯನ್ನು ಹೊಂದಿದ್ದು ಇವರಿಗೆ ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿ ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರಮವನ್ನು ನಡೆಸಲಾಯಿತು ಜೂ.13 ರಂದು ನಡೆಸಲಾಯಿತು..

 ಕಾರ್ಯಕ್ರಮದಲ್ಲಿ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷೆಯಾದ ಶ್ರೀಮತಿ ಸವಿತಾಚಿದಾನಂದ ಹುಲಿಮನೆ. ಗುತ್ತಿಗಾರು ಕ್ಲಸ್ಟರ್ ನ ಸಮೂಹ ಸಂಪನ್ಮೂಲ ವ್ಯಕ್ತಿಯಾದ  ಕುಶಾಲಪ್ಪ ತುಂಭತ್ತಾಜೆ, ಮುಖ್ಯ ಗುರುಗಳಾದ ಮಲ್ಲೇಶಪ್ಪ ಕೆ ಜಿ, ಹಳೆ ವಿಧ್ಯಾರ್ಥಿ ಸಂಘದ ಅಧ್ಯಕ್ಷರು, ನಿವೃತ್ತ ಶಿಕ್ಷಕರಾದ  ದುಗ್ಗಪ್ಪ ಗೌಡ ಕುಳ್ಳಂಪ್ಪಾಡಿ, ಅಂಗನವಾಡಿ ಶಿಕ್ಷಕಿ ಶ್ರೀಮತಿ ತೇಜಕುಮಾರಿ, ನಿವೃತ್ತ ಶಿಕ್ಷಕಿ ಶ್ರೀಮತಿ ತಿರುಮಲೇಶ್ವರಿ ಕುಳ್ಳಂಪ್ಪಾಡಿ ಶಾಲಾ ಅಡುಗೆ ಸಿಬ್ಬಂದಿಯವರು ಶಾಲಾಭಿವೃದ್ದಿ ಸಮಿತಿ ಸದಸ್ಯರು, ಶಾಲಾ ವಿದ್ಯಾರ್ಥಿಗಳು, ವಿಧ್ಯಾಭಿಮಾನಿಗಳು ಉಪಸ್ಥಿತರಿದ್ದು ನಿವೃತ್ತ ಜೀವನಕ್ಕೆ ಶುಭಹಾರೈಸಿದರು
   ಕಾರ್ಯಕ್ರಮದಲ್ಲಿ  ನಿವೃತ್ತ ಶಿಕ್ಷಕ ಶ್ರೀಯುತ ಚಕ್ರಪಾಣಿ ವಾಗ್ಲೆ ಉಪಸ್ಥಿತರಿದ್ದರು
     ಅತಿಥಿ ಶಿಕ್ಷಕಿಯಾದ ಶ್ರೀಮತಿ ಲತಾಶ್ರೀಸತೀಶ್ ಕಾರ್ಯಕ್ರಮ ನಿರೂಪಿಸಿ ಮುಖ್ಯ ಗುರುಗಳಾದ ಮಲ್ಲೇಶಪ್ಪ ವಂದಾನಾರ್ಪನೆ ಮಾಡಿದರು