ಕಲ್ಲಪಳ್ಳಿ : ನೂತನ ವನ ಸಂರಕ್ಷಣಾ ಸಮಿತಿ ಅಸ್ತಿತ್ವಕ್ಕೆ -ಅಧ್ಯಕ್ಷರಾಗಿ ಜಯಪ್ರಕಾಶ್ ಯನ್.ಕೆ. ಆಯ್ಕೆ

0

ಕಲ್ಲಪ್ಪಳ್ಳಿಯಲ್ಲಿ ನೂತನ ವನ ಸಂರಕ್ಷಣಾ ಸಮಿತಿ ಅಸ್ತಿತ್ವಕ್ಕೆ ಬಂದಿದ್ದು ಅದರ ಉದ್ಘಾಟನೆಯು ಜೂ.14 ರಂದು ಕಲ್ಲಪ್ಪಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾಞಂಗಾಡ್ ರೇಂಜ್ ಆಫೀಸರ್ ರಾಹುಲ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಪನತ್ತಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪ್ರಸನ್ನ ಪ್ರಸಾದ್ ಸಮಿತಿಯನ್ನು ಉದ್ಘಾಟಿಸಿದರು. ಬ್ಲಾಕ್ ಪಂಚಾಯತ್ ಸದಸ್ಯರಾದ ಅರುಣ್ ರಂಗತ್ತಮಲೆ ಹಾಗೂ ಗ್ರಾಮ ಪಂಚಾಯತಿಯ ಸದಸ್ಯರಾದ ರಾಧಾಕೃಷ್ಣ ಕಲ್ಲಪಳ್ಳಿ ಸಮಿತಿಗೆ ಶುಭ ಹಾರೈಸಿದರು. ನೂತನ ವನ ಸಂರಕ್ಷಣಾ ಸಮಿತಿಗೆ ಒಂಬತ್ತು ಜನ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಜಯಪ್ರಕಾಶ್ ಎನ್.ಕೆ.ಯವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಸದಸ್ಯರುಗಳಾಗಿ ಪಿ.ಎ.ಐಸಾಕ್, ದಾಮೋದರ ಪಿ.ಡಿ., ರಾಘವ ಪಾಡಿಕೊಚ್ಚಿ, ಶ್ರೀಮತಿ ನಳಿನಾಕ್ಷಿ , ಶ್ರೀಮತಿ ವಸಂತಿ ಪಾಡಿಕೊಚ್ಚಿ, ಶ್ರೀಮತಿ ರೋಹಿಣಿ, ಜ್ಞಾನೇಶ್ ಪನೆಯಾಲ, ಸುಂದರ ಕಮ್ಮಾಡಿ ಇವರನ್ನು ಆಯ್ಕೆ ಮಾಡಲಾಯಿತು, ಕನ್ವೀನರ್ ಆಗಿ ಫಾರೆಸ್ಟ್ ಆಫೀಸರ್ ಕಾರ್ಯ ನಿರ್ವಹಿಸಲಿರುವರು.
ಕಾರ್ಯಕ್ರಮದಲ್ಲಿ ಫಾರೆಸ್ಟ್ ಆಫೀಸರ್ ಶೇಷಪ್ಪರು ಸ್ವಾಗತಿಸಿ, ಬೀಟ್ ಫಾರೆಸ್ಟರ್ ವಿನೀತ್ ಕಾರ್ಯಕ್ರಮ ನಿರೂಪಿಸಿದರು.