ಪುರೋಹಿತ ಚಂದ್ರಶೇಖರ್ ಭಟ್ ಕೋಟೆಮುಂಡುಗಾರುರವರಿಗೆ ಜಿಲ್ಲಾ ಮಟ್ಟದ ‘ಸೇವಾರತ್ನ ಪ್ರಶಸ್ತಿ’

0

ಕಳಂಜ ಗ್ರಾಮದ ಪುರೋಹಿತ ಚಂದ್ರಶೇಖರ್ ಭಟ್ ಕೋಟೆಮುಂಡುಗಾರುರವರಿಗೆ ಆಕ್ಸಿಸ್ ಬ್ಯಾಂಕ್ ಮತ್ತು ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್ ಸಹಯೋಗದಲ್ಲಿ ಜಿಲ್ಲಾ ಮಟ್ಟದ ‘ಸೇವಾರತ್ನ ಪ್ರಶಸ್ತಿ’ ಯನ್ನು ಕೇಂದ್ರ ಕಛೇರಿಯಲ್ಲಿ ನೀಡಿ ಗೌರವಿಸಲಾಯಿತು. ಇವರೊಂದಿಗೆ ಬಡವರಿಗೆ ಮನೆ, ವಿದ್ಯಾಭ್ಯಾಸಕ್ಕೆ ಧನ ಸಹಾಯ ಇತ್ಯಾದಿ ಸಮಾಜಮುಖಿ ಸಹಕಾರವನ್ನು ಮಾಡುತ್ತಾ ಬಂದಿರುವ ಗಣ್ಯರನ್ನು ಗುರುತಿಸಿ ಪ್ರಶಸ್ತಿ ನೀಡಲಾಯಿತು.