ರಂಗಮನೆಯಲ್ಲಿ ಹಿಮಾಲಯ ಧ್ಯಾನ ಯೋಗ ವೀಡಿಯೋ ಶಿಬಿರ

0

ದಕ್ಷಿಣ ಭಾರತ ಸಮರ್ಪಣಾ ಆಶ್ರಮ ಬೆಂಗಳೂರು ಇದರ ವತಿಯಿಂದ ಸುಳ್ಯದ ಹಳೆಗೇಟು ಬಳಿ ರಂಗಮನೆಯಲ್ಲಿ ಹಿಮಾಲಯ ಧ್ಯಾನ ಯೋಗ ವೀಡಿಯೋ ಶಿಬಿರ ಜೂ 15
ರಂದು ನಡೆಯಿತು.

ಸಮರ್ಪಣಾ ಧ್ಯಾನ ಶಿಬಿರದ ಸಿದ್ದಾಂತ ಪ್ರತಿಪಾದಕರಾದ ಶ್ರೀ ಶಿವಕೃಪಾನಂದ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ವಿಡಿಯೋ ಶಿಬಿರ ನಡೆದು ವಸುದೇವ ಕುಟುಂಬಕಂ ಎಂಬ ಸೂಕ್ತಿಯಂತೆ ಎಲ್ಲಾ ಮಾನವ ಜನಾಂಗವು ಪ್ರೀತಿ ಎಂಬ ದಾರದಲ್ಲಿ ಒಟ್ಟಾಗಿ ಸೇರಿ ಮುಂದಿನ ದಿನಗಳಲ್ಲಿ ಕೆಲವು ಅವತಾರ ಪುರುಷರ ರೂಪದಲ್ಲಿ ಜನಗತ್ತಲು ಕೆಲವು ದೈವಿ ಆತ್ಮಗಳು ಕಾಯುತ್ತಿರುವುದರಿಂದ ಅದಕ್ಕಾಗಿ ಸಂಸ್ಕಾರವತ ಯುವಕ ಯುವತಿಯನ್ನು ತಯಾರು ಮಾಡುವುದು ಕೂಡ ಈ ಅಭಿಯಾನದ ಧ್ಯೇಯವಾಗಿರುತ್ತದೆ ಮತ್ತು ಅತ್ಯಮೂಲ್ಯ ಜ್ಞಾನವನ್ನು ಯಾವುದೇ ಪಲಾಪೇಕ್ಷೆ ಇಲ್ಲದೆ ಉಚಿತವಾಗಿ ಈ ಅಭಿಯಾನದ ಮೂಲಕ ಜನತೆಗೆ ಹಂಚುತ್ತಿದ್ದೇವೆ. ದೈಹಿಕ ಸ್ಥರ, ಮಾನಸಿಕ ಸ್ಥರ, ಸಾಮಾಜಿಕ ಸ್ಥರ, ಆಧ್ಯಾತ್ಮಿಕ ಸ್ಥರಗಳಿಗೆ ಅನುಕೂಲವಾಗಲಿದೆ ಎಂದು ಸಂದೇಶ ನುಡಿಗಳನ್ನು ನೀಡಿದರು.

ಶಿಬಿರದಲ್ಲಿ ದಕ್ಷಿಣ ಭಾರತದ ಪ್ರಮುಖ ಆಚಾರ್ಯ ಮುಕುಂದ ಭಾಹಿ, ಹಿರಿಯ ಸಾಧಕರಾದ ರವಿಕಿರಣ್ ಶೀರಾಲಿ ಬೆಂಗಳೂರು, ಚಂದ್ರಶೇಖರ ಬೆಂಗಳೂರು, ಸೆಂಟರ್ ಆಚಾರ್ಯ ಶ್ರೀಮತಿ ಗೌರಿ ಕೆ ಎನ್,ಶ್ರೀಮತಿ ಶೋಭಾ ಶಿವಪ್ರಸಾದ್ ಕಣಿಪ್ಪಿಲ, ಸುಳ್ಯದ ಸಂಯೋಜಕರಾದ ಜಯಂತಿ ರಾವ್ ಹಾಗೂ ಮಂಜುಳಾ ಬಿ,ಸುಳ್ಯ ನ. ಪಂ ಸದಸ್ಯ ಬುದ್ಧ ನಾಯ್ಕ್, ಮೊದಲಾದವರು ಉಪಸ್ಥಿತರಿದ್ದರು.

ಶಿಬಿರದಲ್ಲಿ ಸುಳ್ಯದ ನೂರಾರು ಮಂದಿ ಭಾಗವಹಿಸಿ ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.

ಸಂಸ್ಥೆಯ ಸದಸ್ಯರುಗಳಾದ ಶ್ರೀಹರಿ ಮಂಗಳೂರು ಹಾಗೂ ಮಂಜುಳಾ ಬಿ ಸುಳ್ಯ ಕಾರ್ಯಕ್ರಮ ನಿರೂಪಿಸಿದರು.