ಕರ್ನಾಟಕ – ಕೇರಳ ಗಡಿಭಾಗವಾಗಿರುವ ಮಂಡೆಕೋಲು ಗ್ರಾಮದ ಮುರೂರು – ಪಂಜಿಕಲ್ಲು ತನಕ 4 ಕಿ.ಮೀ. ರಸ್ತೆಯಲ್ಲಿ ಊರವರು ಜೂ.15ರಂದು ಶ್ರಮದಾನ ನಡೆಸಿದ್ದಾರೆ.

ರಸ್ತೆಯ ಎರಡೂ ಬದಿಯಲ್ಲಿಯೂ ಪೊದೆಗಳು ತುಂಬಿ ರಸ್ತೆಗೆ ವಾಲಿಕೊಂಡಿದ್ದವು. ಸಂಚಾರ ದುಸ್ತರವಾಗಿತ್ತು. ಈ ರಸ್ತೆ ಕೇರಳಕ್ಕೆ ಸೇರಿದ್ದು ಅಲ್ಲಿಯ ಪಿಡಬ್ಲ್ಯುಡಿ ಇಲಾಖೆಯವರು ಪೊದೆ ಕಡಿಯುವ ಕಾರ್ಯ ಮಾಡುತ್ತಿದ್ದರು. ಆದರೆ ಈ ಬಾರೀ ಅವರು ಕೆಲಸ ಮಾಡದೇ ಇದ್ದುದರಿಂದ ಸಮಸ್ಯೆ ಎದುರಾಗಿತ್ತು.ಇದನ್ನು ಮನಗಂಡ ಮುರೂರು, ದೇವರಗುಂಡ, ಪಂಜಿಕಲ್ಲು ಭಾಗದ ಸುಮಾರು 50 ಮಂದಿ ಸೇರಿ ಶ್ರಮದಾನ ನಡೆಸಿ, ಪೊದೆಗಳನ್ನು ಕಡಿದು ರಸ್ತೆ ಬದಿ ಸ್ವಚ್ಚಗೊಳಿಸಿದರು.
















ಈ ಸಂದರ್ಭದಲ್ಲಿ ಮಂಡೆಕೋಲು ಗ್ರಾ.ಪಂ. ಸದಸ್ಯರಾದ ಬಾಲಚಂದ್ರ ದೇವರಗುಂಡ, ನವೀನ್ ಮುರೂರು, ಪ್ರಮುಖರಾದ ನಾಗೇಶ ದೇವರಗುಂಡ, ಆಶಿಕ್ ದೇವರಗುಂಡ, ಕುಸುಮಾ ದೇವರಗುಂಡ, ಡಿ.ವಿ.ಸುರೇಶ್, ತುಳಸಿನಿ ಬಾಲಚಂದ್ರ ಮೊದಲಾದವರು ಇದ್ದರು.
ಶ್ರಮದಾನದಲ್ಲಿದ್ದವರಿಗೆ ಮುರೂರು ಬೆಳ್ಳಿಪ್ಪಾಡಿ ತರವಾಡು ಮನೆಯಲ್ಲಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು.










