ಯಾದವ ಸಭಾ ಪ್ರಾದೇಶಿಕ ಸಮಿತಿ ಬೆಳ್ಳಾರೆ ಇದರ ವತಿಯಿಂದ ಬೆಳ್ಳಾರೆ ಪ್ರಾದೇಶಿಕ ಸಮಿತಿಯ ಯಾದವ ಸಮುದಾಯದ 1ರಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಕೊಡೆ ಮತ್ತು ಪುಸ್ತಕ ವಿತರಣೆ ಜೂ. 15ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಾದವ ಸಭಾ ಬೆಳ್ಳಾರೆ ಪ್ರಾದೇಶಿಕ ಸಮಿತಿಯ ಅಧ್ಯಕ್ಷ ಕ್ಯಾಪ್ಟನ್ ಸುದಾನಂದ ಮಣಿಯಾಣಿ ಪೆರುವಾಜೆ ವಹಿಸಿದ್ದರು. ಒಟ್ಟು 32 ವಿದ್ಯಾರ್ಥಿಗಳಿಗೆ ಕೊಡೆ ಮತ್ತು ಪುಸ್ತಕ, ಪೆನ್ನು, ಪೆನ್ಸಿಲ್ ವಿತರಿಸಲಾಯಿತು.
















ಸಮುದಾಯದ ದಾನಿಗಳು ಕಾರ್ಯಕ್ರಮಕ್ಕೆ ಧನಸಹಾಯ ಮಾಡುವ ಮೂಲಕ ಸಹಕರಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಯಾದವ ಸಭಾದ ಅಧ್ಯಕ್ಷ ಎ.ಕೆ ಮಣಿಯಾಣಿ ಬೆಳ್ಳಾರೆ, ಯಾದವ ಸಭಾ ತಾಲೂಕು ಸಮಿತಿಯ ಅಧ್ಯಕ್ಷ ಕರುಣಾಕರ ಹಾಸ್ಪರೆ ಅತಿಥಿಗಳಾಗಿ ಭಾಗವಹಿಸಿದರು. ಕಾರ್ಯಕ್ರಮ ದಲ್ಲಿ ಚಂದ್ರಹಾಸ ಮಣಿಯಾಣಿ ಪಡ್ಪು, ಸಂಜೀವ ಮಣಿಯಾಣಿ ಬೀಡು, ಸುಧಾಮ ಮಣಿಯಾಣಿ ಕಾಪಿನಕಾಡು, ಮೋಹನ್ ಬೀಡು, ಶಶಿಧರ ಮಣಿಯಾಣಿ ಬೀಡು, ಶಶಿಧರ ಮಣಿಯಾಣಿ ಅಯ್ಯನಕಟ್ಟೆ ಕಾರ್ಯದರ್ಶಿ ಸಂತೋಷ ಬಾಯಂಬಾಡಿ, ಮನ್ವಿತ್ ದೋಲ್ತಡಿ, ಶ್ರೀಮತಿ ವಾರಿಜ ಬಾಳಿಲ, ಶ್ರೀಮತಿ ಸುಲೋಚನಾ ಪಡ್ಪು, ಶ್ರೀಮತಿ ಯಶೋದಾ ಪೆರುವಾಜೆ, ಶ್ರೀಮತಿ ಶಶಿಪ್ರಭಾ ಪೆರುವಾಜೆ, ಉಷಾ ಮಣಿಮಜಲು,ಶ್ರೀಮತಿ ವೀಣಾ ಪಡ್ಪು, ಶ್ರೀಮತಿ ದಿವ್ಯ ಉಮ್ಮಿಕಳ, ಶ್ರೀಮತಿ ಮೋನಿಷಾ ಬೀಡು, ನಿಶ್ಮಿತಾ ಬೀಡು ಸೇರಿದಂತೆ ಸಮಾಜ ಬಾಂಧವರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಚಂದ್ರಹಾಸ ಮಣಿಯಾಣಿ ಪಡ್ಪು ನೆರವೇರಿಸಿದರು.










