














ಕುಕ್ಕುಜಡ್ಕದಿಂದ
ದೊಡ್ಡತೋಟ ಕಡೆಗೆ ಸಂಚರಿಸುವ ರಸ್ತೆ ಮಧ್ಯೆ ವಿಪರೀತ ಸುರಿದ ಗಾಳಿ ಮಳೆಗೆ ಬೃಹತ್ ಗಾತ್ರದ ಮರವೊಂದು ಬಿದ್ದು ವಾಹನ ಸಂಚಾರಕ್ಕೆ ಅಡಚಣೆಯುಂಟಾಯಿತು. ಸ್ಥಳೀಯರಾದ ಸೋಮಶೇಖರ ಸಂಕೇಶ ರವರ ನೇತೃತ್ವದಲ್ಲಿ ಮರ ಕತ್ತರಿಸುವ ಮೆಷಿನ್ ಬಳಸಿ ಮರ ತೆರವು ಕಾರ್ಯಾಚರಣೆ ಮಾಡಲಾಯಿತು. ಸ್ಥಳೀಯ ವಾಹನ ಚಾಲಕ ಮಾಲಕರು ಪರಿಸರದವರು ಸಹಕರಿಸಿದರು. ಮುಕ್ಕಾಲು ಗಂಟೆ ವಾಹನ ಸಂಚಾರಕ್ಕೆ ಅಡಚಣೆಯಾಗಿದ್ದು ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಸಾಲು ಗಟ್ಟಿ ನಿಂತಿದ್ದವು.




