ಸುಳ್ಯದಲ್ಲಿ ಶಾಖೆ ಹೊಂದಿರುವ ಪ್ರಣವ ಸೌಹಾರ್ದ ಸಹಕಾರಿ ಸಂಘದ ಮಹಾಸಭೆ

0

ಸದಸ್ಯರಿಗೆ 10% ಡಿವಿಡೆಂಟ್ ಘೋಷಣೆ – ಅನಾರೋಗ್ಯ ಪೀಡಿತರಿಗೆ ಧನಸಹಾಯ ಹಸ್ತಾಂತರ

ಸುಳ್ಯದಲ್ಲಿ ಶಾಖೆ ಹೊಂದಿರುವ ಪ್ರಣವ ಸೌಹಾರ್ದ ಸಹಕಾರಿ ಸಂಸ್ಥೆಯ ಯಶಸ್ವಿ ದಶಕ ಪೂರ್ತಿಯ 11 ನೆಯ ವಾರ್ಷಿಕ ಮಹಾಸಭೆ ಮಂಗಳೂರಿನ ಪದವಿನಂಗಡಿಯ ಬೆನಕ ಸಭಾಂಗಣದಲ್ಲಿ ಜೂ. 15 ರಂದು ನಡೆಯಿತು.

ಆರಂಭದಲ್ಲಿ ಸದಸ್ಯರ ಮಕ್ಕಳಿಂದ ಶಾಸ್ತ್ರೀಯ ನೃತ್ಯ ಜರಗಿತು. ಸಭೆಯ ಅಧ್ಯಕ್ಷತೆಯನ್ನು ಸಹಕಾರಿ ಸಂಘದ ಅಧ್ಯಕ್ಷ ಜಿ.ಆರ್ ಪ್ರಸಾದ್ ರವರು ವಹಿಸಿ ಸಂಸ್ಥೆಯ ಕಳೆದ ಆರ್ಥಿಕ ವರ್ಷದ ಆರ್ಥಿಕ ತಕ್ತೆಯನ್ನು ಮಂಡಿಸಿದರು. ಸಂಸ್ಥೆಗೆ ಕಳೆದ ಆರ್ಥಿಕ ವರ್ಷ ರೂ.66.64 ಲಕ್ಷ ಒಟ್ಟಾರೆ ಲಾಭ ಇದ್ದು ನಿವ್ವಳ ಲಾಭ ರೂ. 52 .75 ಲಕ್ಷವಿದೆ. ರೂ 3500 ಲಕ್ಷ ಎಲ್ಲಾ ರೀತಿಯ ಠೇವಣಿ ನಿಧಿಯ ಆಧಾರವಿದೆ. ಸದಸ್ಯರ ಸಂಖ್ಯೆ 7800 ಇದ್ದು ರೂ. 165 ಲಕ್ಷ ಪಾಲು ಬಂಡವಾಳ ಇದೆ. ರೂ.160 ಲಕ್ಷ ವಿವಿಧ ನಿಧಿಗಳಿದ್ದು ಸದಸ್ಯರಿಗೆ ಈ ವರುಷವೂ ಶೇಕಡಾ 10 ಪ್ರತಿಶತ ಲಾಭಾಂಶ ಹಂಚಲು ನಿರ್ಧರಿಸಲಾಗಿದೆ ಎಂದರು.

ಸಂಸ್ಥೆ ಲೆಕ್ಕಪತ್ರ ಪರಿಶೋಧನೆಯಲ್ಲಿ A ದರ್ಜೆ ಮಾನ್ಯತೆ ಉಳಿಸಿಕೊಂಡಿದೆ ಹಾಗೂ ಸಾಲ ವಸೂಲಾತಿ ಉತ್ತಮ ಫಲಿತಾಂಶ ತೋರಿಸುತ್ತಾ ಬಂದಿದೆ ಎಂದು ಹೇಳಿದರು. ಕಳೆದ ಆರ್ಥಿಕ ವರ್ಷದಲ್ಲಿ ಖರೀದಿಸಿದ ನಿವೇಶನದಲ್ಲಿ ಈ ವರ್ಷ ಪ್ರಣವ ತನ್ನ ಪ್ರಧಾನ ಕಚೇರಿ ಕಟ್ಟಡವನ್ನು ನಿರ್ಮಿಸುವ ಯೋಜನೆ ಇದ್ದು ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ ಎಂದು ವಿವರಿಸಿದರು. ಸಂಸ್ಥೆ ತನ್ನ ಗ್ರಾಹಕರಿಗಾಗಿ ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ನೀಡುವ ಉದ್ದೇಶವಿದ್ದು ಈ ನಿಟ್ಟಿನಲ್ಲಿ ಈಗಾಗಲೇ ಕಾರ್ಯೋನ್ಮುಖವಾಗಿದೆ ಎಂದರು.

ಉಪಾಧ್ಯಕ್ಷ ಪ್ರಶಾಂತ್ ಪೈ ಯವರು ಸ್ವಾಗತಿಸಿ ಸಂಸ್ಥೆ ನಡೆದು ಬಂದ ದಾರಿಯನ್ನು ವಿವರಿಸಿದರು. ನಿರ್ದೇಶಕ ಹಾಗೂ ಪ್ರಣವ ಚಾರಿಟೇಬಲ್ ಟ್ರಸ್ಟ್ ನ ಕೋಶಾಧಿಕಾರಿ ಸೋಮಪ್ಪ ನಾಯಕ್ ರವರು ಪ್ರಣವದ ಸಮಾಜಮುಖಿ ಕಾರ್ಯಕ್ರಮಗಳ ಬಗ್ಗೆ ತಿಳಿ ಹೇಳಿದರು.

ಅನಾರೋಗ್ಯ ಪೀಡಿತ ಸದಸ್ಯರಾದ ರಘುವೀರ ಗಟ್ಟಿ, ಗಣೇಶ್ ಭಟ್ ಮತ್ತು ಇತ್ತೀಚೆಗೆ ಮಂಗಳೂರು ಮಂಜನಾಡಿಯಲ್ಲಿ ಮನೆ, ತನ್ನ ಇಬ್ಬರು ಮಕ್ಕಳನ್ನು ಅಲ್ಲದೆ ತನ್ನ ಎರಡೂ ಕಾಲುಗಳನ್ನು ಕಳೆದುಕೊಂಡ ಪ್ರಸ್ತುತ ಆಸ್ಪತ್ರೆಯ ತೀವ್ರ ನಿಗಾದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶ್ರೀಮತಿ ಅಶ್ವಿನಿ ಅವರಿಗೆ ಆರ್ಥಿಕ ಸಹಾಯವನ್ನು ನೀಡಲಾಯಿತು.

ಲೆಕ್ಕಪರಿಶೋಧಕ ಸಿಎ ಅನಂತ ಪದ್ಮನಾಭರವರು ಹಾಗೂ ಆಂತರಿಕ ಲೆಕ್ಕ ಪರಿಶೋಧಕಿ ಸಿಎ ಶ್ರಾವಣಿ ಅವರು ಉಪಸ್ಥಿತರಿದ್ದರು.

ನಿರ್ದೇಶಕ ವೆಂಕಟೇಶ ವಂದಿಸಿದರು. ಸದಸ್ಯ ಅತಿಥಿ ಪತ್ರಿಕೆಯ ಸಂಪಾದಕ ಬಾಲಕೃಷ್ಣ ಕಾರ್ಯಕ್ರಮ ನಿರೂಪಿಸಿದರು.

ನಿರ್ದೇಶಕರುಗಳಾದ ರವೀಂದ್ರನಾಥ್ ಪಿ, ಸುಬ್ರಹ್ಮಣ್ಯ ಭಟ್, ರವಿಶಂಕರ್ ಪಿ. ಎನ್, ಪದ್ಮರಾಜ್ ಬಲ್ಲಾಳ್, ದಯಾಸಾಗರ ಪೂಂಜಾ, ಭಗವಾನ್ ದಾಸ್ ಅಡ್ಯಂತಾಯ, ಡಾ. ಶ್ಯಾಮಪ್ರಸಾದ್ ಶೆಟ್ಟಿ, ಜಗದೀಶ್ ಶೆಟ್ಟಿ ಬಿಜೈ, ಡಾ. ವೆಂಕಟೇಶ್, ಶ್ರೀಮತಿ ಜಯಲಕ್ಷ್ಮಿ ಚಂದ್ರಹಾಸ್, ಶ್ರೀಮತಿ ಮೀರಾ ಕರ್ಕೇರ, ವೃತಿಪರ ನಿರ್ದೇಶಕರಾದ ಸತೀಶ್ ಭಟ್ , ಶ್ರೀಮತಿ ಮಮತಾ ರಾವ್, ಕಾರ್ಯೋನ್ಮುಖ ನಿರ್ದೇಶಕ ಕೃಷ್ಣ ಕಾಮತ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ( ಪ್ರಭಾರ ) ಶ್ರೀಮತಿ ಮಮತಾ ವೈ ಶೆಟ್ಟಿಗಾರ್ ಮತ್ತು ಸಂಸ್ಥೆಯ ಎಲ್ಲಾ ಸಿಬ್ಬಂದಿಗಳು ಹಾಜರಿದ್ದರು.
ಉತ್ತಮ ಸಂಖ್ಯೆಯಲ್ಲಿ ಸದಸ್ಯರು ಹಾಜರಿದ್ದರು.