ಸುಳ್ಯ‌ ಬಿ.ಇ.ಒ ಕಚೇರಿಯ ಮೂವರಿಗೆ ವರ್ಗಾವಣೆ

0

ಸುಳ್ಯ ಕಚೇರಿಗೆ ಇಬ್ಬರ ನೇಮಕ

ಸುಳ್ಯ‌ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಮೂವರು ಸಿಬ್ಬಂದಿಗಳಿಗೆ ವರ್ಗಾವಣೆಯಾಗಿದ್ದು, ಸುಳ್ಯ ಕಚೇರಿಗೆ ಇಬ್ಬರು ಬಂದಿದ್ದಾರೆ.

ಸುಳ್ಯ‌ ಬಿ.ಇ.ಒ. ಕಚೇರಿಯ ಹರಿಶ್ಚಂದ್ರ ಶೆಟ್ಟಿಯವರು ಬಂಟ್ವಾಳ ಬಿ.ಇ.ಒ. ಕಚೇರಿಗೆ, ಪೃಥ್ವಿ ಕುಮಾರ್ ಟಿ. ಯವರು ರಾಮನಗರ ಡಿಡಿಪಿಐ ಕಚೇರಿಗೆ, ಸನತ್ ಪೆಲ್ತಡ್ಕ ರವರು ಮಡಿಕೇರಿ ಡಿಡಿಪಿಐ ಕಚೇರಿಗೆ ವರ್ಗಾವಣೆಯಾಗಿದ್ದಾರೆ.

ಐವರ್ನಾಡು ಪ್ರೌಢಶಾಲೆಯ ಯೋಗೀಶ್ ಭರತ್ ಹಾಗೂ ಎಲಿಮಲೆ ಸರಕಾರಿ ಪ್ರೌಢಶಾಲೆಯ ವಿಜೇತ್ ರವರು ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ವರ್ಗಾವಣೆಗೊಂಡು ಬಂದಿದ್ದಾರೆ.