ಬಂದಡ್ಕ : ಗೌರಿಕೆರೆ ಶ್ರೀ ಅಣ್ಣಪ್ಪ ಚೆಡೇಕಲ್ ಶ್ರೀ ಚಾಮುಂಡೇಶ್ವರಿ ಶ್ರೀ ರಕ್ತೇಶ್ವರಿ ದೈವಸ್ಥಾನದಲ್ಲಿ ಎಸ್‌ಎಸ್‌ಎಲ್‌ಸಿ ಹಾಊ ಪಿಯುಸಿಯಲ್ಲಿ ಉನ್ನತ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ

0

ಬಂದಡ್ಕ ಗೌರಿಕೆರೆ ಶ್ರೀ ಅಣ್ಣಪ್ಪ ಚೆಡೇಕಲ್ ಶ್ರೀ ಚಾಮುಂಡೇಶ್ವರಿ ಶ್ರೀ ರಕ್ತೇಶ್ವರಿ ದೈವಸ್ಥಾನದಲ್ಲಿ ಪಿ. ಯು. ಸಿ ಹಾಗೂ ಎಸ್. ಎಸ್. ಎಲ್. ಸಿ ಪರೀಕ್ಷೆಯಲಿ ಉನ್ನತ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಿದರು.
ಕರಾಡುಕ ಪಂಚಾಯತ್ ಸದಸ್ಯ ಕೃಷ್ಣನ್ ಬಿ. ಅಧ್ಯಕ್ಷತೆ ವಹಿಸಿದ್ದು, ಕಾರ್ಯಕ್ರಮ ಉದ್ಘಾಟಿಸಿದರು. ಕುತ್ತಿಕೋಲ್ ಪಂಚಾಯತ್ ಸದಸ್ಯ ಕುಂಚಿರಾಮನ್ ಬಿ. ವಿಜೇತರನ್ನು ಗೌರವಿಸಿದವರು. ಸರಕಾರಿ ಶಾಲೆ ಕುತ್ತಿಕೋಲ್ ನಿವೃತ್ತ ಮುಖ್ಯೋಪಾಧ್ಯಾಯರಾದ ಫಿಲಿಪ್ ಚೇರುಕ್ಕಾರಕುನೆಲ್ ಕೃತಜ್ಞತೆ ಸಲ್ಲಿಸಿದರು ಆನಂದ ಬಿ., ಗೋಪಾಲನ್ ಬಿ. ಉಪಸ್ಥಿತರಿದ್ದರು.