ಆನೆ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸಿಕೊಡುವಂತೆ ಆಲೆಟ್ಟಿ ನಿವಾಸಿಗಳಿಂದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಮನವಿ

0

ಅಲೆಟ್ಟಿ ಗ್ರಾಮದ ಕಲ್ಚರ್ಪೆ ಪಾಲಡ್ಕ, ಅರಂಬೂರು, ಪರಿವಾರಕಾನದ ರಸ್ತೆಯ ಸಮೀಪದ ಕೃಷಿಕರಿಗೆ ಆನೆ ಹಾವಳಿ ಮಾಡುತ್ತಿದ್ದು ತುರ್ತು ಕೃಮ ಕೈಗೊಳ್ಳುವಂ ತೆ ಸ್ಥಳೀಯರು ಜನಪ್ರತಿನಿಧಿ ಗಳಿಗೆ ಮತ್ತು ಅಧಿಕಾರಿಗಳಿಗೆ ಜೂ. 16 ರಂದು ಮನವಿ ನೀಡಿದ್ದಾರೆ.

ಅಲೆಟ್ಟಿ ಗ್ರಾಮದ 6ನೇ ಕ್ಷೇತ್ರ ಅರಂಬೂರು, ಪರಿವಾರಕಾನ, ಪಾಲಡ್ಕ, ಕಲ್ಚರ್ಪೆ ಭಾಗವು ಪೂಮಲೆ ಅರಣ್ಯ ರಕ್ಷಿತಾರಣ್ಯ ಸಮೀಪವಿದ್ದು, ಕಳೆದ ಹಲವಾರು ಸಮಯಗಳಿಂದ ಆನೆಗಳ ಹಿಂಡು ಸುಮಾರು ಬಹುತೇಕ ಕೃಷಿಕರ ಕೃತಾವಳಿಗಳನ್ನು ನಾಶಮಾಡಿದೆ.

ಈಗಲೂ ದಿನಾ ರಾತ್ರೆಯಾದ ತಕ್ಷಣ ಭಯದ ವಾತಾವರಣ ಜನರದ್ದು ಆಗಿದ್ದು,ರಾತ್ರಿ ಪೂರ್ತಿ ನಿದ್ರೆಯಿಲ್ಲದೆ ರೈತರು ಕಂಗಲಾಗಿರುತ್ತಾರೆ. ಈ ಭಾಗದಲ್ಲಿ ಸುಮಾರು 220 ಕ್ಕಿಂತಲೂ ಅಧಿಕ ಮನೆಗಳು ಹಾಗೂ ಸುಮಾರು 400 ಎಕರೆ ಪ್ರದೇಶಗಳಲ್ಲಿ ಬಾಳೆ,ತೆಂಗು,ಭತ್ತ,ಅಡಿಕೆ ಕೃಷಿ ಮಾಡುತ್ತಿದ್ದು,ಆನೆ ದಾಳಿಯಿಂದ ಸಂಪೂರ್ಣ ನಾಶದ ಅಂಚಿಗೆ ಬಂದಿರುತ್ತದೆ.

ಅಲ್ಲದೆ ರಾತ್ರಿ ವೇಳೆ ವಾಹನ ಸಂಚಾರಕ್ಕೆ ಭಯವಾಗಿದ್ದು, ರಾತ್ರಿ ಸರ್ವೇ ಸಾಮಾನ್ಯ ರಾಜ್ಯ ರಸ್ತೆಯಲ್ಲಿ ಕಾಣಿಸುತ್ತಿದೆ.

ಈ ಬಗ್ಗೆ ಅರಣ್ಯ ಇಲಾಖೆಗೆ ತಿಳಿಸಿದರೂ ಶಾಶ್ವತ ಪರಿಹಾರ ಸಿಗಲಿಲ್ಲ.ಈ ಬಗ್ಗೆ ರಾಜ್ಯ ರಸ್ತೆಯ ಸಮೀಪ ಇಕ್ಕಡೆಗಳಲ್ಲಿ 50 ಮೀಟರ್‌ಗೆ ಒಂದರಂತೆ ವಿದ್ಯುತ್ ದೀಪ ಅಳವಡಿಸುವುದು, ಹಾಗೂ ಆನೆ ತಡೆಗೋಡೆಯನ್ನು ಅಗತ್ಯವಾಗಿ ಪರಿವಾರಕಾನದಿಂದ-ಮರ ದ ಡಿಪೋ-ಪಾಲಡ್ಕದಿಂದ ಕಲ್ಚರ್ಪೆ ತನಕ ತುರ್ತಾಗಿ ಕಾಮಾಗಾರಿ ಮಾಡಿ ರೈತಾಪಿ ಜನರ ಪ್ರಾಣ ಉಳಿಸಬೇಕೆಂ ದು ಮನವಿ ಮೂಲಕ ವಿನಂತಿಸಿ ಕ್ಕೊಂಡಿದ್ದಾರೆ.

ಈ ಮನವಿಯನ್ನು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಳ್ಯ,

ಕ್ಯಾಪ್ಟನ್ ಬ್ರಿಜೇಶ್ ಚೌಟ, ಸಂಸದರು, ದ.ಕ ಲೋಕ ಸಭಾ ಕ್ಷೇತ್ರ,ಕು.ಭಾಗೀರಥಿ ಮುರುಳ್ಯ ಶಾಸಕರು ಸುಳ್ಯ ವಿಧಾನ ಸಭಾ ಕ್ಷೇತ್ರ,ಅರಣ್ಯ ಸಚಿವರು ಕರ್ನಾಟಕ ಸರಕಾರ, ಸಹಾಯಕ ಅರಣ್ಯಸಂರಕ್ಷಣಾಧಿಕಾರಿಗಳು ಸುಳ್ಯ ವಲಯ,ದಿನೇಶ್ ಗುಂಡುರಾವ್, ಉಸ್ತುವಾರಿ ಸಚಿವರು ದ.ಕ ಜಿಲ್ಲೆ,ಜಿ.ಪ.ಕಛೇರಿ ದಕ್ಷಿಣ ಕನ್ನಡ,ತಹಶೀಲ್ದಾರರು, ಸುಳ್ಯ,ಅಧ್ಯಕ್ಷೆ/ಪಂಚಾಯತು ಅಭಿವೃದ್ದಿ ಅಧಿಕಾರಿ,ಆಲೆಟ್ಟಿ ಗ್ರಾಮ ಪಂಚಾಯತ್ ಇವರಿಗೆ ಮನವಿಯ ಯಥಾಪ್ರತಿ ಯನ್ನು ನೀಡಲಾಗಿದೆ.

ಈ ಸಂಧರ್ಭದಲ್ಲಿ ಪ್ರಮುಖರಾದ ಜಗದೀಶ್ ಸರಳಿಕುಂಜ, ಶ್ರೀಪತಿ ಭಟ್, ಅನಿಲ್‌ ಪರಿವಾರಕಾನ, ಅಶೋಕ್ ಪೀಚೆ, ಸುದೇಶ್ ಅರಂಬೂರು, ರವಿ, ಪುಷ್ಪಾವತಿ ಕುಡೆಕಲ್ಲು, ಗುರುಪ್ರಸಾದ್ ಕುಡೆಕಲ್ಲು, ಶಬರೀಶ ಪರಿವಾರಕಾನ ಮತ್ತಿತರರು ಉಪಸ್ಥಿತರಿದ್ದರು.