ಎಲಿಮಲೆ ಸರಕಾರಿ ಪ್ರೌಢಶಾಲೆಯಲ್ಲಿ ವನಮಹೋತ್ಸವ

0

ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜು ಸುಬ್ರಹ್ಮಣ್ಯದ ಎನ್ ಎಸ್ ಎಸ್ ಘಟಕ, ಅರಣ್ಯ ಇಲಾಖೆ ಹಾಗೂ ಸರಕಾರಿ ಪ್ರೌಢಶಾಲೆ ಎಲಿಮಲೆಯ ಸಹಭಾಗಿತ್ವದಲಿ ಜೂ.15 ರಂದು ಶಾಲಾ ಆವರಣದಲ್ಲಿ 73 ಗಿಡಗಳನ್ನು ನೆಡುವ ಮೂಲಕ ವನಮಹೋತ್ಸವ ಆಚರಿಸಲಾಯಿತು.

   ದೇವಚಳ್ಳ ಗ್ರಾಮ ಪಂಚಾಯತ್ ಅಧ್ಯಕ್ಷ ಶೈಲೇಶ್ ಅಂಬೆಕಲ್ಲು ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.




ಉಪವಲಯ ಅರಣ್ಯಾಧಿಕಾರಿ ಶ್ರೀಮತಿ ಸೌಮ್ಯ ಪಿ.ಎನ್. ಅರಣ್ಯ ಇಲಾಖೆ ವತಿಯಿಂದ ಗಿಡಗಳನ್ನು ಹಸ್ತಾಂತರಿಸಿದರು.

ಕಾರ್ಯಕ್ರಮದಲ್ಲಿ
ಎಸ್ ಡಿ ಎಂ ಸಿ ಅಧ್ಯಕ್ಷ ಪುರುಷೋತ್ತಮ ಸುಳ್ಳಿ, ಉಪಾಧ್ಯಕ್ಷ ಅಚ್ಚುತ ಮುಂಡೋಕಜೆ,
ಸದಸ್ಯರಾದ ನೂತನ್ ಕುಮಾರ್ ದೇರಮಜಲು, ಕೃಷ್ಣಪ್ಪ ಗೌಡ ಹರ್ಲಡ್ಕ, ಮಾಧವ ಶೀರಡ್ಕ , ಎಲಿಮಲೆ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ್ ಅಂಬೆಕಲ್ಲು, ಗಸ್ತು ಅರಣ್ಯ ಪಾಲಕರಾದ ನಿಂಗಪ್ಪ ಕೊಪ್ಪಾ ಮತ್ತು ಶಿವಾನಂದ ಬಳಗನೂರು, ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ಯೋಜನಾಧಿಕಾರಿಗಳಾದ ದಿನೇಶ್ ಎಣ್ಣೆಮಜಲು, ಎನ್ ಎಸ್ ಎಸ್ ಯೋಜನಾಧಿಕಾರಿ ಗಳಾದ ಶ್ರೀಮತಿ ಪೂರ್ಣಿಮಾ ಮತ್ತು ಶ್ರೀಮತಿ ಸೌಮ್ಯಾ, ಶಿಕ್ಷಕರಾದ ಮುರಳೀಧರ ಪಿ ಜೆ, ಸಿಬ್ಬಂದಿಗಳಾದ ವಿಜೇತ್ ಎಂ ಸಿ ಹಾಗೂ ಹಿರಿಯ ವಿದ್ಯಾರ್ಥಿ ಪ್ರಸನ್ನ ಎಸ್ ಎನ್ ಉಪಸ್ಥಿತರಿದ್ದರು.

     ಕಳೆದ ವರ್ಷ ಈ ಶಾಲೆಯಲ್ಲಿ ನಡೆದ ಎನ್ ಎಸ್ ಎಸ್ ವಾರ್ಷಿಕ ಶಿಬಿರದ ಸವಿನೆನಪಿಗಾಗಿ ಶಾಲಾ ಆವರಣದಲ್ಲಿ ವಿವಿಧ ಬಗೆಯ 73 ಗಿಡಗಳನ್ನು ನೆಡುವ ಮೂಲಕ ವನಮಹೋತ್ಸವ ಆಚರಿಸಲಾಯಿತು. ಸರಕಾರಿ ಪ್ರೌಢಶಾಲೆಯ ಪೋಷಕರು ಶ್ರಮದಾನದೊಂದಿಗೆ ಸಹಕರಿಸಿದರು.