ಸ್ಕೂಟಿಗೆ ಗುದ್ದಿ ಪರಾರಿಯಾದ ವಾಹನ

0

ಯುವತಿಗೆ ಗಾಯ : ಸುಳ್ಯ ಆಸ್ಪತ್ರೆಗೆ ‌ದಾಖಲು

ಸುಳ್ಯದಿಂದ ಪೆರಾಜೆಗೆ ಯುವತಿಯೊಬ್ಬಳು ಚಲಾಯಿಸಿಕೊಂಡು ಹೋಗುತ್ತಿದ್ದ ಸ್ಕೂಟಿಗೆ ವಾಹನ ವೊಂದು ಢಿಕ್ಕಿಯಾಗಿ, ಆಕೆ‌ ರಸ್ತೆಗೆ ಎಸೆಯಲ್ಪಟ್ಟು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ವರದಿಯಾಗಿದೆ.

ಪೆರಾಜೆಯ ಶಾಹಿದಾ ಎಂಬವರು ಸುಳ್ಯದಿಂದ ಪೆರಾಜೆಯ ತಮ್ಮ ಮನೆಗೆ ಸ್ಕೂಟಿಯಲ್ಲಿ ಹೋಗುತ್ತಿದ್ದರು. ಅರಂಬೂರು‌ ಮರದ ಡಿಪ್ಪೋ ಸಮೀಪ ಸ್ಕೂಟಿಗೆ ವಾಹನವೊಂದು ಢಿಕ್ಕಿಯಾಯಿತು. ಪರಿಣಾಮ ಶಾಹಿದಾ ರಸ್ತೆಗೆ ಬಿದ್ದರು. ಗುದ್ದಿದ ವಾಹನದವರು ನಿಲ್ಲಿಸದೇ‌ ಮುಂದಕ್ಕೆ ಹೋದರು.

ಅದೇ ವೇಳೆಗೆ ಆ ರಸ್ತೆಯಾಗಿ ಕಾರಿನಲ್ಲಿ ಬಂದ ಪೈಚಾರಿನ ಆರೀಫ್ ರವರು ಆ ಯುವತಿಯನ್ನು ತನ್ನ ಕಾರಿನಲ್ಲಿ ಹಾಕಿ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ದಾಖಲಿಸಿದರೆಂದು ತಿಳಿದುಬಂದಿದೆ.