ಬೂಡು ಕೇರ್ಪಳ ಶ್ರೀ ಭಗವತಿ ಯುವ ಸೇವಾ ಸಂಘದ ವತಿಯಿಂದ ಸತ್ಯನಾರಾಯಣ ಪೂಜೆ

0

ಶ್ರೀ ಭಗವತಿ ಯುವ ಸೇವಾ ಸಂಘ ಬೂಡು ಕೇರ್ಪಳ ಕುರುಂಜಿಗುಡ್ಡೆ ಇದರ ವತಿಯಿಂದ ಸಂಘಕ್ಕೆ 25 ವರ್ಷ ಪೂರ್ಣಗೊಳ್ಳುವ ಸುಸಂದರ್ಭ ಹಾಗೂ ಸಂಘದ ಎಲ್ಲಾ ಕೆಲಸ ಕಾರ್ಯಗಳಿಗೆ ದೇವರ ಅನುಗ್ರಹಕೊಸ್ಕರ ಜೂ.16 ರಂದು ಚೆನ್ನಕೇಶವ ದೇವಸ್ಥಾನದಲ್ಲಿ ಸಂಘದ ವತಿಯಿಂದ ಶ್ರೀ ಸತ್ಯನಾರಾಯಣ ದೇವರ ಪೂಜೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಗೌರವ ಅಧ್ಯಕ್ಷ ಬೂಡು ರಾಧಾಕೃಷ್ಣ ರೈ, ಸಂಘದ ಅಧ್ಯಕ್ಷ ಸುನಿಲ್ ಕೇರ್ಪಳ, ನಿರ್ದೇಶಕರಾದ ಜನಾರ್ಧನ ನಾಯ್ಕ ಕೇರ್ಪಳ, ಕೋಶಾಧಿಕಾರಿ ಮಹಾಬಲ ರೈ, ಸಂಘಟನಾ ಕಾರ್ಯದರ್ಶಿ ಪ್ರದೀಪ್ ರೈ ಬೂಡು, ಜೊತೆಕಾರ್ಯದರ್ಶಿಗಳದ ವಿಜಯ ಕುಮಾರ್ ಕುರಂಜಿ ಗುಡ್ಡೆ, ಕುಸುಮಧರ ರೈ ಬೂಡು, ಕ್ರೀಡಾ ಕಾರ್ಯದರ್ಶಿ ಸೀತಾರಾಮ, ಸಾಂಸ್ಕೃತಿಕ ಕಾರ್ಯದರ್ಶಿ ಕಿಶೋರ್ ಶೆಟ್ಟಿ ಬೂಡು, ಸದಸ್ಯರದ ಮೋನಪ್ಪ ಪೂಜಾರಿ, ದೀಕ್ಷಿತ್ ಕೇರ್ಪಳ, ಅನಿತಾ ವಿಜಯ ಕುಮಾರ, ಲತಾ ಮಹಾಬಲ ರೈ ಮೊದಲಾದವರು ಉಪಸ್ಥಿತರಿದ್ದರು