














ಕಡಬ ತಾಲೂಕಿನ ಎಡಮಂಗಲ ಬಳಿಯ ದೋಳ್ಪಾಡಿ ಗ್ರಾಮದ ಕೂರೇಲು ಎಂಬಲ್ಲಿ ವಿದ್ಯುತ್ ಶಾಕ್ ಗೆ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಜೂ 16ರಂದು ನಡೆದಿದೆ.
ಮೃತಪಟ್ಟ ಮಹಿಳೆಯನ್ನು ಕೂರೇಲು ನಿವಾಸಿ ಪುರಂದರ ಎಂಬವರ ಪತ್ನಿ ಜಲಜಾಕ್ಷಿ (ರೇಖಾ) (35) ಎಂದು ಗುರುತಿಸಲಾಗಿದೆ. ಇವರು ಮದ್ಯಾಹ್ನ 2.30 ರ ವೇಳೆಗೆ ತಮ್ಮ ತೋಟದಲ್ಲಿರುವ ಕೃಷಿ ಪಂಪು ಚಾಲನೆ ಮಾಡಲು ಪ್ರಯತ್ನಿಸುತ್ತಿದ್ದ ವೇಳೆ ಪಂಪ್ ಚಾಲನೆಗೊಂಡಿಲ್ಲವೆಂದು ವಿದ್ಯುತ್ ಕೇಬಲ್ ಮುಟ್ಟಿದ ವೇಳೆ ವಿದ್ಯುತ್ ಶಾಕ್ ಹೊಡೆದಿದೆ. ತಕ್ಷಣ ಅವರನ್ನು ಕಾಣಿಯೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಅಷ್ಟರಲ್ಲೇ ಅವರ ನಿಧನರಾಗಿದ್ದಾರೆ. ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಮೆಸ್ಕಾಂ ಸವಣೂರು ಶಾಖಾ ಕಛೇರಿಯ ಶಾಖಾಧಿಕಾರಿ ರಾಜೇಶ್, ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗಣೇಶ್ ಉದನಡ್ಕ, ಕಾಣಿಯೂರು ಗ್ರಾಮ ಪಂಚಾಯಿತಿ ಪಿಡಿಒ ರಘು ಬಿ.ಎನ್., ಸ್ಥಳೀಯ ಗ್ರಾ.ಪಂ. ಸದಸ್ಯರಾದ ಲೋಕಯ್ಯ ಪರವ ದೋಳ್ಪಾಡಿ, ದೇವಿಪ್ರಸಾದ್ ದೋಳ್ಪಾಡಿ, ಅಂಬಾಕ್ಷಿ ಕೂರೇಲು, ತಾರಾನಾಥ ಇಡ್ಯಡ್ಕ, ಮೀರಾ ಕಲೆಂಜೋಡಿ ಮತ್ತಿತರರು ಭೇಟಿ ನೀಡಿದರು. ಮೃತರು ಆರು ಹಾಗೂ ಮೂರನೆ ತರಗತಿಯಲ್ಲಿ ಓದುತ್ತಿರುವ ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.
ಮೃತರು ದೋಳ್ಪಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿಯಾಗಿ ಕಳೆದ 6 ತಿಂಗಳ ಹಿಂದೆ ಸೇರ್ಪಡೆಗೊಂಡಿದ್ದು, ಕಾಣಿಯೂರು ಗ್ರಾಮ ಪಂಚಾಯತ್ ನ ಸಂಜೀವಿನಿ ಒಕ್ಕೂಟದ ಕೃಷಿ ಸಖಿಯಾಗಿಯೂ ಕಾರ್ಯ ನಿರ್ವಹಿಸಿದ್ದರು.










