ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಸಹಿತ ಗಣ್ಯರು ಭಾಗಿ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಜು.18ರಂದು ಸುಳ್ಯಕ್ಕೆ ಆಗಮಿಸಿ ಸುಳ್ಯದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಯನ್ನು ನೆರವೇರಿಸಿದರು.

ಸುಳ್ಯ ತಾಲೂಕು ಪಂಚಾಯತ್ ರಾಜ್ಯ ಇಂಜಿನಿಯರಿಂಗ್ ಉಪ ವಿಭಾಗದಲ್ಲಿ 1 ಕೋಟಿ 65 ಲಕ಼್ ವೆಚ್ಚದಲ್ಲಿ ನೂತನವಾಗಿ ಕಟ್ಟಲಾದ ಕಚೇರಿ ಕಟ್ಟಡ ಉದ್ಘಾಟನೆಯನ್ನು ಸಚಿವ ದಿನೇಶ್ ಗುಂಡೂರಾವ್ ನೆರವೇರಿಸಿದರು. ಶಾಸಕಿ ಭಾಗೀರಥಿ ಮುರುಳ್ಯ ದೀಪ ಬೆಳಗಿದರು.

ಅಲ್ಲಿಂದ ಸುಳ್ಯ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಬ್ಲಾಕ್ ಪಬ್ಲಿಕ್ ಹೆಲ್ತ್ ಲ್ಯಾಬ್ ಮತ್ತು ನೂತನ ಶವಗಾರ ಉದ್ಘಾಟನೆ ನೆರವೇರಿಸಿದರು.
















ಬಳಿಕಅರಂಬೂರಿನ 26 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣವಾದ ಸಾಮಾಜಿಕ ವಲಯ ಅರಣ್ಯಾಧಿಕಾರಿಗಳ ಕಚೇರಿ ಕಟ್ಟಡ ಉದ್ಘಾಟನೆ ನೆರವೇರಿಸಿದರು.

ಬಳಿಕ ಸುಳ್ಯ ನಗರ ಪಂಚಾಯತ್ ಕಚೇರಿಯಲ್ಲಿ ನಗರ ಯೋಜನಾ ಪ್ರಾಧಿಕಾರ ಕಚೇರಿಯ ಉದ್ಘಾಟನೆ ನೆರವೇರಿಸಿದರು. ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸಿದ್ದರು.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ, ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಉಪಾಧ್ಯಕ್ಷ ಬುದ್ದ ನಾಯ್ಕ, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ, ತಾಲೂಕು ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಸೂಡ ಅಧ್ಯಕ್ಷ ಕೆ.ಎಂ.ಮುಸ್ತಫ, ಪುತ್ತೂರು ಸಹಾಯಕ ಕಮೀಷನರ್ ಸ್ಟೆಲ್ಲಾ ವರ್ಗೀಸ್, ಡಿಸಿಎಫ್ ಅಂಥೋನಿ ಮರಿಯಪ್ಪ,

ತಹಶೀಲ್ದಾರ್ ಮಂಜುಳಾ, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣ ಮುಖಂಡರಾದ ಹರೀಶ್ ಕುಮಾರ್.ಕೆ, ಧನಂಜಯ ಅಡ್ಡಂಗಾಯ, ಟಿ.ಎಂ.ಶಹೀದ್ ತೆಕ್ಕಿಲ್, ಜಿ.ಕೃಷ್ಣಪ್ಪ, ಪಿ.ಸಿ.ಜಯರಾಮ, ರಾಧಾಕೃಷ್ಣ ಬೊಳ್ಳೂರು, ನಿತ್ಯಾನಂದ ಮುಂಡೋಡಿ, ಗೀತಾ ಕೋಲ್ಟಾರ್, ಸರಸ್ವತಿ ಕಾಮತ್, ಬೆಟ್ಟ ಜಯರಾಮ ಭಟ್, ಇಟ್ಬಾಲ್ ಎಲಿಮಲೆ, ಸೋಮಶೇಖರ ಕೊಯಿಂಗಾಜೆ, ಜಿ.ಕೆ.ಹಮೀದ್, ಮಹಮ್ಮದ್ ಕುಂಞ ಗೂನಡ್ಕ, ರಹೀಂ ಬೀಜದಕಟ್ಟೆ, ರಾಜು ಪಂಡಿತ್, ಭವಾನಿ ಶಂಕರ್ ಕಲ್ಮಡ್ಕ, ಶಾಫಿ ಕುತ್ತಮೊಟ್ಟೆ, ರಂಜಿತ್ ರೈ ಮೇನಾಲ, ಶಹೀದ್ ಪಾರೆ, ರಾಧಾಕೃಷ್ಣ ಪರಿವಾರಕಾನ ಮತ್ತಿತರರು ಉಪಸ್ಥಿತರಿದ್ದರು










