ಅಮರ ಕ್ರೀಡಾ ಮತ್ತು ಕಲಾ ಸಂಘ ಬಡ್ಡಡ್ಕ ಇದರ ಬೆಳ್ಳಿ ಹಬ್ಬದ ಆಚರಣೆ ಪ್ರಯುಕ್ತ ಜೂ. 15 ರಂದು ವನಮಹೋತ್ಸವ ಕಾರ್ಯಕ್ರಮ ಮತ್ತು ಹಣ್ಣಿನ ಗಿಡಗಳ ವಿತರಣಾ ಕಾರ್ಯಕ್ರಮ ನಡೆಯಿತು.















ಸಂಘದ ಗೌರವಾಧ್ಯಕ್ಷರು, ಬೆಳ್ಳಿ ಹಬ್ಬ ಸಮಿತಿ ಅಧ್ಯಕ್ಷ ಡಾ. ಜಯದೀಪ್ ಎನ್ ಎ, ಆಲೆಟ್ಟಿ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಜನಾರ್ದನ ಪಿ.ಡಿ, ಆಲೆಟ್ಟಿ ಶ್ರೀ ಸದಾಶಿವ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಪ್ರಸನ್ನ ಕೆ ಸಿ, ಸಂಘದ ಅಧ್ಯಕ್ಷ ಕಮಲಾಕ್ಷ ಬಡ್ಡಡ್ಕ, ಅಮರ ಸ್ವಸಹಾಯ ಸಂಘದ ಅಧ್ಯಕ್ಷ ಶಶಿಧರ ಬಡ್ಡಡ್ಕ ಉಪಸ್ಥಿತರಿದ್ದರು.

ಸನತ್ ಚಳ್ಳಂಗಾರು ಪ್ರಾರ್ಥಿಸಿದರು. ಡಾ.ಜಯದೀಪ್ ಎನ್.ಎ ಪ್ರಾಸ್ತಾವಿಕ ಮಾತನಾಡಿದರು. ವೆಂಕಟ್ರಮಣ ದೋಣಿಮೂಲೆ ಸ್ವಾಗತಿಸಿದರು. ಸನತ್ ಚಳ್ಳಂಗಾರು ಕಾರ್ಯಕ್ರಮ ನಿರೂಪಿಸಿದರು. ಬಡ್ಡಡ್ಕದಲ್ಲಿ ಮತ್ತು ಆಲೆಟ್ಟಿ ಪಂಜಿಮಲೆ ಒತ್ತೆಕೋಲ ಮಜಲಿನಲ್ಲಿ ಹಣ್ಣಿನ ಗಿಡ ನೆಡಲಾಯಿತು. ಸ್ಥಳೀಯರಿಗೆ ಉಚಿತವಾಗಿ ಹಣ್ಣಿನ ಗಿಡ ವಿತರಿಸಲಾಯಿತು










