ಪೆರುವಾಜೆ ಗ್ರಾಮ ಪಂಚಾಯತ್ ಗೆ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭೇಟಿ

0

ಪಂಚಾಯತ್ ಕೊಠಡಿ ಉದ್ಘಾಟನೆ – ಸಾರ್ವಜನಿಕರಿಂದ ಅಹವಾಲು ಸ್ವೀಕಾರ

ಪೆರುವಾಜೆ ಗ್ರಾಮ ಪಂಚಾಯತ್ ಗೆ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಜೂ.18 ರಂದು ಭೇಟಿ ನೀಡಿದರು.
ಪಂಚಾಯತ್ ನ ಕೊಠಡಿಯನ್ನು ಅವರು ಉದ್ಘಾಟನೆ ಮಾಡಿದರು.


ಬಳಿಕ ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ನಂತರ ಉಸ್ತುವಾರಿ ಸಚಿವರು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ತೆರಳಿದರು.


ಈ ಸಂದರ್ಭದಲ್ಲಿ ಸುಳ್ಯ ತಹಶೀಲ್ದಾರ್ ಮಂಜುಳಾ,ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ , ಪಂಚಾಯತ್ ಪಿಡಿಒ ತಿರುಮಲೇಶ್ ,ಮುಖಂಡರಾದ ಹರೀಶ್ ಕುಮಾರ್,ಗ್ರಾಮ ಪಂಚಾಯತ್ ಸದಸ್ಯ ಸಚಿನ್ ರಾಜ್ ಶೆಟ್ಟಿ,ಮಾಜಿ ಅಧ್ಯಕ್ಷೆ ಶ್ರೀಮತಿ ಅನುಸೂಯ ಪೆರುವಾಜೆ,
ಪಿ.ಸಿ.ಜಯರಾಮ,ಕೃಷ್ಣಪ್ಪ ಜಿ, ರಾಧಾಕೃಷ್ಣ ಬೊಳ್ಳೂರು,ಸದಾನಂದ ಮಾವಾಜಿ,ಟಿ.ಎಂ.ಶಹೀದ್, ಅನಿಲ್ ರೈ ಚಾವಡಿಬಾಗಿಲು,ಗಂಗಾಧರ ಪಿ.ಎಸ್, ಸುರೇಶ್ ಅಮೈ, ಗೋಕುಲ್ ದಾಸ್, ಆನಂದ ಬೆಳ್ಳಾರೆ,ಇಬ್ರಾಹಿಂ ಅಂಬಟೆಗದ್ದೆ,ನಿತಿನ್ ರಾಜ್ ಶೆಟ್ಟಿ, ಪಿಡಿಒ ತಿರುಮಲೇಶ್ , ಹಮೀದ್ ಬೆಳ್ಳಾರೆ,ಪೆರುವಾಜೆ ಕಾಲೇಜಿನ ಪ್ರಾಂಶುಪಾಲ ಬಾಲಸುಬ್ರಹ್ಮಣ್ಯ ಪಿ.ಎಸ್,ಭವಾನಿಶಂಕರ ಕಲ್ಮಡ್ಕ,ಓವಿನ್ ಪಿಂಟೋ, ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು, ಪಂಚಾಯತ್ ಸದಸ್ಯರು,ಸಿಬ್ಬಂದಿ ವರ್ಗದವರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.