ಜ್ಞಾನದೀಪ ವಿದ್ಯಾರ್ಥಿ ತನುಷ್. ಎಂ .ಎಚ್. ಯೋಗದಲ್ಲಿ ಪ್ರಥಮ

0
 ಕೆನರಾ ಹೈಸ್ಕೂಲ್, ಮಂಗಳೂರಿನಲ್ಲಿ,  ಆರೋಗ್ಯಧಾಮ ಯೋಗ ವಿದ್ಯಾ ಟ್ರಸ್ಟ್ ಮಂಗಳೂರು, ತಪಸ್ವಿ ಸ್ಕೂಲ್ ಆಫ್ ಯೋಗ, ಮಂಗಳೂರು ಹಾಗೂ ಕೆನರಾ ಹೈಸ್ಕೂಲ್ ಅಸೋಸಿಯೇಷನ್ ಮಂಗಳೂರು ಇವುಗಳ ಸಂಯುಕ್ತ  ಆಶ್ರಯದಲ್ಲಿ ಜೂ.15ರಂದು ನಡೆದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಮಟ್ಟದ ಯೋಗ ಸ್ಪರ್ಧೆಯಲ್ಲಿ ಜ್ಞಾನದೀಪ ಎಲಿಮಲೆಯ 9ನೇ ತರಗತಿ ವಿದ್ಯಾರ್ಥಿ ತನುಷ್ ಎಂ. ಎಚ್. ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿದ್ದಾನೆ. 

ಹಲವಾರು ಜಿಲ್ಲಾ ಮಟ್ಟದ, ರಾಜ್ಯ, ರಾಷ್ಟ್ರ ಮಟ್ಟದ ಯೋಗ ಸ್ಪರ್ಧೆಯಲ್ಲಿ ಪ್ರಶಸ್ತಿಯನ್ನು ಪಡೆದ ತನುಷ್ ಮೊಂಟಡ್ಕ ಕುಟುಂಬದ ಹರೀಶ್ ಎಂ. ಹಾಗೂ ಭವಾನಿ ಎಂ.ಎಚ್. ಇವರ ಪುತ್ರ.