















ಸುಳ್ಯದ ಶ್ರೀ ರಾಂಪೇಟೆಯ ಬಾಳೆಮಕ್ಕಿಯಲ್ಲಿ ರಸ್ತೆ ಮಧ್ಯೆ ಸಡನ್ ಬ್ರೇಕ್ ಹಾಕಿ ನಿಲ್ಲಿಸಿದ ಕಾರಿಗೆ ಹಿಂದುಗಡೆಯಿಂದ ಬರುತ್ತಿದ್ದ ಸ್ಕೂಟಿ ಡಿಕ್ಕಿ ಹೊಡೆಯಿತು. ಇದರ ಹಿಂದುಗಡೆಯಿಂದ ಬಂದ ಬೈಕ್ ಸ್ಕೂಟಿಗೆ ತಾಗಿ ದ್ವಿಚಕ್ರ ವಾಹನಗಳ ಸವಾರರಿಬ್ಬರು ರಸ್ತೆಗೆ ಬಿದ್ದರು. ಮಹಾರಾಷ್ಟ್ರ ನೋಂದಾವಣೆಯ ಕಾರು ರಸ್ತೆ ಮಧ್ಯೆ ಸಡನ್ನಾಗಿ ಬ್ರೇಕ್ ಹಾಕಿದ್ದರಿಂದ ಸ್ಕೂಟಿ ಸವಾರರು ನಿಯಂತ್ರಣ ತಪ್ಪಿ ಕಾರಿನ ಹಿಂಬದಿಗೆ ತಾಗಿ ರಸ್ತೆ ಮೇಲೆ ಬಿದ್ದರು. ಪರಿಣಾಮವಾಗಿ
ಸವಾರರಿಬ್ಬರು ಅಲ್ಪ ಸ್ವಲ್ಪ ಗಾಯಗೊಂಡಿರುವುದಾಗಿ ತಿಳಿದು ಬಂದಿದೆ. ಸ್ಥಳೀಯರು ಸೇರಿ ಮಾತುಕತೆಯ ಮೂಲಕ ಇತ್ಯರ್ಥ ಪಡಿಸಿದರು.











