ಅರಂಬೂರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಯು ಸಂಘದ ಅಧ್ಯಕ್ಷೆ ಶ್ರೀಮತಿ ಸೌಮ್ಯ ಬಿ.ಭಾರದ್ವಾಜ್ರವರ ಅಧ್ಯಕ್ಷತೆಯಲ್ಲಿ ಜೂ.18 ರಂದು ಭಜನಾ ಮಂದಿರದ ಶ್ರೀ ಗೋಪಾಲಕೃಷ್ಣ ಸಭಾಭವನದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಸಂಘಕ್ಕೆ ಅತೀ ಹೆಚ್ಚು ಗುಣ ಮಟ್ಟದ ಹಾಲು ಪೂರೈಸಿದ ಶ್ರೀಮತಿ ಶ್ಯಾಮಲಾ ವಿಷ್ಣು ಪ್ರಸಾದ್, ಶ್ರೀಮತಿ ವನಿತಾ ಭಾರದ್ವಾಜ್, ಶ್ರೀಮತಿ ಖುರ್ಷಿದಬಾನು, ಶ್ರೀಮತಿ ಶ್ಯಾಮಲಾ ಪದ್ಮಯ್ಯ ರವರನ್ನು ಸನ್ಮಾನಿಸಲಾಯಿತು.















ಕಾರ್ಯದರ್ಶಿ ಶ್ರೀಮತಿ ಉಷಾದಯಾನಂದ ರೈ ವರದಿ ವಾಚಿಸಿದರು. ಸಂಘದ ಅಧ್ಯಕ್ಷರು ಸದಸ್ಯರಿಗೆ ಮತ್ತು ಸಿಬ್ಬಂದಿ ವರ್ಗದವರಿಗೆ ಬೋನಸ್ ವಿತರಿಸಲಾಯಿತು.
ಒಕ್ಕೂಟದ ವಿಸ್ತರಣಾಧಿಕಾರಿ ಹರೀಶ್ ಕುಮಾರ್, ಪಶು ವೈದ್ಯಾಧಿಕಾರಿ ಡಾ.ಕೇಶವ ಸುಳ್ಳಿ, ನಿರ್ದೇಶಕರಾದ ಶ್ರೀಮತಿ ಕವಿತಾ, ಶ್ರೀಮತಿ ಸಂಧ್ಯಾ ಭಾರದ್ವಾಜ್, ಶ್ರೀಮತಿ ಯಶೋಧ, ಶ್ರೀಮತಿ ಪದ್ಮಾವತಿ, ಶ್ರೀಮತಿ ಜಲಜಾಕ್ಷಿ ರೈ, ಶ್ರೀಮತಿ ಉಷಾ ರೈ, ಶ್ರೀಮತಿ ಮೋಹಿನಿ ಉಪಸ್ಥಿತರಿದ್ದರು.
ಶ್ರೀಮತಿ ಶ್ಯಾಮಲಾ ಪ್ರಾರ್ಥಿಸಿದರು. ಶ್ರೀಮತಿ ಮೋಹಿನಿ ಸ್ವಾಗತಿಸಿದರು. ಭಾಸ್ಕರನ್ ನಾಯರ್ ವಂದಿಸಿದರು. ಶ್ರೀಮತಿ ಜ್ಯೋತಿ ಕೃಷ್ಣ ಭಟ್ ಕಾರ್ಯಕ್ರಮ ನಿರೂಪಿಸಿದರು.










