ಕುಸಿದ ರಸ್ತೆಗೆ ತೆಂಗಿನ ಗರಿಯ ರಕ್ಷೆ : ಅಪಾಯ ತಿಳಿದಿದ್ದರೂ ಸುಮ್ಮನಿರುವ ನಗರಾಡಳಿತ
ಸುಳ್ಯದ ಮುಖ್ಯರಸ್ತೆಯಿಂದ ರಥಬೀದಿಗೆ ತಿರುಗುವ, ಪೋಲೀಸ್ ಠಾಣೆ ಎದುರಿನ ರಸ್ತೆ ಕುಸಿದು ದೊಡ್ಡ ಹೊಂಡವಾಗಿದ್ದು, ಅದಕ್ಕೆ ವಾಹನಗಳು ಬೀಳದಂತೆ ತೆಂಗಿನ ಗರಿಯನ್ನು ಇಡಲಾಗಿದೆ.















ಕಳೆದ ಒಂದು ತಿಂಗಳ ಹಿಂದೆ ರಥಬೀದಿ ತಿರುಗುವಲ್ಲಿ ರಸ್ತೆ ಕುಸಿದಿತ್ತು. ಈ ವಿಷಯ ನಗರ ಪಂಚಾಯತ್ ಗೆ ತಿಳಿದು ಸಿಬ್ಬಂದಿಗಳು ಬಂದು ಸಿಮೆಂಟ್ ಹುಡಿಗಳನ್ನು ಹಾಕಿ ಮುಚ್ಚಿದ್ದರು.ಅದಾದ ಬಳಿಕ ಹೊಂಡ ಮುಚ್ಚಿದಲ್ಲಿ ಇನ್ನೊಂದು ಭಾಗ ರಸ್ತೆ ನಿಧಾನವಾಗಿ ಜಗ್ಗುತ್ತಾ ಬಂದಿತ್ತು. ಇಂದು ಆ ಜಾಗದಲ್ಲಿ ಹೊಂಡವಾಗಿದೆ. ಅಪಾಯ ಸಂಭವಿಸದಂತೆ ಆ ಹೊಂಡಕ್ಕೆ ತೆಂಗಿನ ಗರಿಯ ರಕ್ಷಣೆ ಮಾಡಲಾಗಿದೆ.
ರಸ್ತೆಯಲ್ಲಿ ತಿಂಗಳ ಹಿಂದೆ ಹೊಂಡವಾಗಿದ್ದರೂ ಅದರ ಪಕ್ಕದಲ್ಲಿ ಮತ್ತೆ ಜಗ್ಗುತ್ತಾ ಬಂದರೂ ನ.ಪಂ. ಸುಮ್ಮಿದ್ದುದು ಆಶ್ಚರ್ಯ. ಆ ರಸ್ತೆ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಬರುತ್ತದೆ ಯಾದರೂ ಈ ಸಮಸ್ಯೆಯನ್ನು ಅವರಿಗೆ ತಿಳಿಸುವ ಕೆಲಸ ನ.ಪಂ. ಮಾಡಬೇಕಿತ್ತು.










