ಪಂಜ ಸ.ಪ.ಪೂ.ಕಾಲೇಜುನಲ್ಲಿ ವಿದ್ಯಾರ್ಥಿ ಸಂಘ ರಚನೆ

0

ಪಂಜ ಸ.ಪ.ಪೂ.ಕಾಲೇಜುನಲ್ಲಿ ವಿದ್ಯಾರ್ಥಿ ಸಂಘ ರಚನೆಯು ಜೂ.19 ರಂದು ಪ್ರಭಾರ ಪ್ರಾಂಶುಪಾಲರಾದ ಚಿದಾನಂದ ಕೆ ರವರ ಮಾರ್ಗದರ್ಶನದಲ್ಲಿ ನಡೆಯಿತು. ವಿದ್ಯಾರ್ಥಿ ನಾಯಕಿಯಾಗಿ ರಕ್ಷಿತಾ ಜಿ, ಕ್ರೀಡಾ ಕಾರ್ಯದರ್ಶಿಯಾಗಿ (ಬಾಲಕ)ಮಹಮ್ಮದ್ ಹಾಶಿಂ, ಕ್ರೀಡಾ ಕಾರ್ಯದರ್ಶಿಯಾಗಿ (ಬಾಲಕಿ)ವನ್ಯಶ್ರೀ ಕೆ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ( ಬಾಲಕ) ತೇಜಸ್ ಕುಮಾರ್ ಕೆ ಎಸ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ (ಬಾಲಕಿ) ಕಾವ್ಯ ಹಾಗೂ ಆರೋಗ್ಯ ಕಾರ್ಯದರ್ಶಿಯಾಗಿ ಯಶಸ್ವಿನಿ ಪಿ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿ ಸಂಘ ರಚನೆಯಲ್ಲಿ ಉಪನ್ಯಾಸಕರು  ಪಾಲ್ಗೊಂಡಿದ್ದರು.