ರಾಜ್ಯ ಮಟ್ಟದ ಎಂ. ಜಿ. ಕಾವೇರಮ್ಮ ಅರೆಭಾಷೆ ಕವನ ಸ್ಪರ್ಧೆ

0

ಜು.10ರ ಒಳಗಾಗಿ ವಾಟ್ಸಾಪ್ ಮೂಲಕವೂ ಕಳುಹಿಸಬಹುದು

ಚೆಂಬು ಸಾಹಿತ್ಯ ವೇದಿಕೆ ವತಿಯಿಂದ ಏಳನೇ ವರ್ಷದ ಎಂ. ಜಿ. ಕಾವೇರಮ್ಮ ರಾಜ್ಯ ಮಟ್ಟದ ಅರೆಭಾಷೆ ಕವನ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.
ಅರೆಭಾಷೆಯಲ್ಲಿ ಗಮನಾರ್ಹ ಸಾಧನೆ ಮಾಡಿದಂತಹ ಮತ್ತು ಹಲವಾರು ಪ್ರಶಸ್ತಿಗಳನ್ನು ಸಾಹಿತ್ಯ ಸೇವೆಗಾಗಿ ಪಡೆದುಕೊಂಡ ಎಂ. ಜಿ. ಕಾವೇರಮ್ಮನವರ 86 ನೇ ಹುಟ್ಟುಹಬ್ಬದ ಸಲುವಾಗಿ ಈ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಒಬ್ಬರು ಒಂದು ಸ್ವ ರಚಿತ ಅರೆಭಾಷೆ ಕವಿತೆಯನ್ನು ಈ ಕೆಳಕಂಡ ವಿಳಾಸಕ್ಕೆ ಮಿಂಚಂಚೆ ಕಳಿಸಬೇಕು. ವಾಟ್ಸಾಪ್ ಮೂಲಕವು ಕೆಳಗಿನ ಸಂಖ್ಯೆಗೆ ಕಳಿಸಬಹುದು. ಅಕ್ಷರ ದೋಷವಿಲ್ಲದೆ ಯಾವುದೇ ವಯೋಮಾನದವರು, ಯಾವುದೇ ವಿಷಯದ ಕುರಿತು ಕವಿತೆಯನ್ನು ರಚಿಸಬಹುದು. ಕವಿತೆಯನ್ನು ಜುಲೈ ಹತ್ತರ ಒಳಗಾಗಿ ತಲುಪಿಸಬೇಕು.

chembusaahithya@gmail. Com
6364660272