ಮೇನಾಲ: ಅಂಬೇಡ್ಕರ್ ಸಮಿತಿಯಿಂದ ಶ್ರಮದಾನ

0


ಅಜ್ಜಾವರ ಗ್ರಾಮದ 4ನೇ ವಾರ್ಡಿನ ಬಾಡೇಲು ಕಾಲೋನಿಯ ರಸ್ತೆಯು ಮಳೆಯಿಂದಾಗಿ ಕೆಸರು ಮಣ್ಣು ತುಂಬಿದ ಕಾರಣ ಶಾಲಾ ಮಕ್ಕಳಿಗೆ ಮತ್ತು ಆ ಪರಿಸರದ ಸಾರ್ವಜನಿಕರಿಗೆ ನಡೆದುಕೊಂಡು ಹೋಗಲು ಕಷ್ಟವಾಗುತ್ತಿತ್ತು.

ಇದನ್ನು ಮನಗಂಡ ಅಂಬೇಡ್ಕರ್ ಆದರ್ಶ ಸೇವಾ ಸಮಿತಿ ವತಿಯಿಂದ ಶ್ರಮದಾನ ಮೂಲಕ ರಸ್ತೆ ಸರಿಪಡಿಸಲಾಯಿತು. ಸಮಿತಿಯ ಪದಾಧಿಕಾರಿಗಳಾದ ,.ಸುಂದರ ಬಿ.ಕೆ.ಬಾಡೇಲು,ರವಿ ಬಿ.ಬಾಡೇಲು,ಶೀನಪ್ಪ ಬಿ.ಬಾಡೇಲು,ಅಕ್ಷಯ್ ಬಾಡೇಲು,ಬಾಲಕೃಷ್ಣ ಡಿ.ಪಿ.ದೊಡ್ಡೇರಿ,ಹರೀಶ್ ಎಮ್.ಎಸ್.ಮೇನಾಲ,ಚಂದ್ರಶೇಖರ ಕೆ.ಪಲ್ಲತ್ತಡ್ಕ ಶ್ರಮದಾನದಲ್ಲಿ ಭಾಗವಹಿಸಿದರು.