ಪ್ರಸ್ತುತ ಸಂದರ್ಭದಲ್ಲಿ ಇರಾನ್ ಇಸ್ರೇಲ್ ನಡುವೆ ಯುದ್ಧ ನಡೆಯುತ್ತಿದ್ದು ನೂರಾರು ಸಾವು ನೋವುಗಳು ಸಂಭವಿಸುತ್ತಿದೆ.
ಈ ಯುದ್ಧವು ಮುಂದುವರೆಯದೆ ವಿಶ್ವ ಶಾಂತಿಯಾಗಲಿ ಎಂಬ ಉದ್ದೇಶದಿಂದ ಶುಕ್ರವಾರದ ಜುಮಾ ನಮ್ಮಾಝ್ ಬಳಿಕ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.















ಸ್ಥಳೀಯರು ಜುಮಾ ಮಸೀದಿಯ ಮುದರ್ರಿಸ್ ಅಬ್ದುಲ್ ಖಾದರ್ ಸಖಾಫಿ ಅಲ್ ಖಾಮಿಲ್ ಅವರು ವಿಶೇಷ ಪ್ರಾರ್ಥನೆಯನ್ನು ನೆರವೇರಿಸಿ ಯುದ್ಧವು ಯಾವುದೇ ದೇಶಕ್ಕೆ ಒಳ್ಳೆಯದಲ್ಲ.
ಯುದ್ಧದಿಂದ ಅತಿಯಾದ ಸಾವು ನೋವುಗಳು ಸಂಭವಿಸುವುದು ಮತ್ತು ಅದರಿಂದ ಆರ್ಥಿಕ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಉಂಟಾಗುವುದು. ಆದ್ದರಿಂದ ಯಾವುದೇ ದೇಶದಲ್ಲಿ ಯುದ್ಧ ನಡೆಯುವುದು ಸರಿಯಲ್ಲ. ಪ್ರಸ್ತುತ ಉಂಟಾಗಿರುವ ಯುದ್ಧದ ಕರಿಮೋಡವು ಶಾಂತ ಗೊಂಡು ವಿಶ್ವ ಶಾಂತಿ ಗೊಳ್ಳಲಿ ಎಂಬ ಪ್ರಾರ್ಥನೆಯನ್ನು ಅವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಮಸೀದಿಯ ಆಡಳಿತ ಸಮಿತಿಯ ಅಧ್ಯಕ್ಷರು ಪದಾಧಿಕಾರಿಗಳು, ಹಾಗೂ ನೂರಾರು ಮುಸ್ಲಿಂ ಬಾಂಧವರು ಉಪಸ್ಥಿತರಿದ್ದರು.










