ಸುಬ್ರಹ್ಮಣ್ಯ: ಎಸ್.ಎಸ್.ಪಿ.ಯು ಕಾಲೇಜಿನಲ್ಲಿ ಯೋಗ ದಿನಾಚರಣೆ

0

ಸುಬ್ರಹ್ಮಣ್ಯ ದ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ವಿಶ್ವ ಯೋಗ ದಿನ ಇಂದು ಆಚರಿಸಲಾಯಿತು.

ಪ್ರಾಚಾರ್ಯ ಸೋಮಶೇಖರ್ ನಾಯಕ್ ಅವರ ನೇತ್ರತ್ವದಲ್ಲಿ, ಹಿರಿಯ ಸಹ ಶಿಕ್ಷಕ ಕೃಷ್ಣ ಭಟ್ ನಿರ್ದೇಶನದಲ್ಲಿ ವಿದ್ಯಾಸಂಸ್ಥೆಯ 1100 ವಿದ್ಯಾರ್ಥಿಗಳು ಯೋಗಾಭ್ಯಾಸ ಮಾಡಿದರು.

ಸುಮಾರು 20 ಕ್ಕೂ ಅಧಿಕ
ಆಸನಗಳನ್ನು ಮಾಡಿಸಲಾಯಿತು.
ಯೋಗಗುರು ಕೃಷ್ಣ ಭಟ್ ಯೋಗಾಸನದ ಮಹತ್ವವನ್ನು ತಿಳಿಸಿದರು.
ರೋಟರಿ ನಿಯೋಜಿತ ಅಧ್ಯಕ್ಷ ಜಯಪ್ರಕಾಶ್.ಆರ್, ಮುಖ್ಯಶಿಕ್ಷಕಿ ನಂದಾ ಹರೀಶ್, ಉಪನ್ಯಾಸಕಿ ಸೌಮ್ಯಾ ದಿನೇಶ್ ವೇದಿಕೆಯಲ್ಲಿದ್ದರು. ಯೋಗ ದಿನಾಚರಣೆ ಅಂಗವಾಗಿ ನಡೆದ ಯೋಗ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಸುಬ್ರಹ್ಮಣ್ಯ ರೋಟರಿ ಕ್ಲಬ್ ಕಾರ್ಯಕ್ರಮಕ್ಕೆ ಸಹಯೋಗ ನೀಡಿತು.