ಅರಂತೋಡು : ಅಂತರಾಷ್ಟ್ರೀಯ ಯೋಗ ದಿನಾಚರಣೆ

0

ಶೈಕ್ಷಣಿಕ ದತ್ತು ನಿಧಿ ವಿತರಣೆ,ಆರೋಗ್ಯ ಮತ್ತು ಇಲಾಖಾ ಮಾಹಿತಿ ಕಾರ್ಯಗಾರ ಸಮಾರಂಭ


ಅರಂತೋಡು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ 2025-2 6ನೇ ಸಾಲಿನ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳಿಗೆ ಕೆ.ಅರ್.ಆನಂದ ಕಲ್ಲುಗದ್ದೆ ಇವರ ದತ್ತಿನಿಧಿ ಯಿಂದ ವಿತರಿಸಲ್ಪಡುವ ನೋಟ್ ಪುಸ್ತಕ ಗಳ ವಿತರಣೆ ಅಂತ ರಾಷ್ಟ್ರೀಯ ಯೋಗ ದಿನಾಚರಣೆ ಮಕ್ಕಳ ಸುರಕ್ಷಾ ಕಾರ್ಯಕ್ರಮ ಆರೋಗ್ಯ ಮಾಹಿತಿ ಹಾಗೂ ಇಲಾಖಾ ಕಾರ್ಯಗಾರ ಜೂನ್ 21 ರಂದು ಶಾಲೆಯ ದಿ. ಯು.ಡಿ.ಶೇಖರ ಸಭಾ ವೇದಿಕೆಯಲ್ಲಿ ನಡೆಯಲಿದೆ.ಅಧ್ಯಕ್ಷತೆಯನ್ನು ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ ವಹಿಸಲಿದ್ದಾರೆ .

ಕಾರ್ಯಗಾರ ಉದ್ಘಾಟನೆಯನ್ನು ಸುಳ್ಯ ಠಾಣೆಯ ಪೊಲಿಸ್ ಉಪನಿರೀಕ್ಷಕ ಸಂತೋಷ್ ಬಿ. ಪಿ.ನೆರವೇರಿಸಲಿದ್ದಾರೆ.ಶ್ರೀಮತಿ ಚಿನ್ನಮ್ಮ ಕಲ್ಲುಗದ್ದೆ ವಿದ್ಯಾರ್ಥಿಗಳಿಗೆ ನೋಟು ಪುಸ್ತಕ ವಿತರಿಸಲಿದ್ದಾರೆ.ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಸುರೇಶ್ ವಾಗ್ಲೆ ಅಂತರ್ ರಾಷ್ಟ್ರೀಯ ಯೋಗ ದಿನಾಚರಣೆ ಮಾಹಿತಿ ನೀಡಲಿದ್ದಾರೆ ಮಕ್ಕಳ ಸುರಕ್ಷತೆ ಹಾಗೂ.ಕಾನೂನು ಅರಿವು ಬಗ್ಗೆ ಸುಳ್ಯ ಠಾಣಾ ಉಪ ನಿರೀಕ್ಷಕ ಸಂತೋಷ್.ಬಿ.ಪಿ.ಮಾಹಿತಿ ನೀಡಲಿದ್ದಾರೆ.

ಸುಳ್ಯ ತಾಲ್ಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಮತಿ ಪ್ರಮೀಳಾ ಬಿ.ಯವರು ಮಕ್ಕಳ ಆರೋಗ್ಯದ ಬಗ್ಗೆ ಮಾಹಿತಿ ನೀಡಲಿದ್ದಾರೆ.ಸುಳ್ಯ ಬಿ.ಆರ್.ಪಿ.ಸುಬ್ರಮಣ್ಯ ಕೆ.ಎನ್ ರವರು ಶಿಕ್ಷಣ ಇಲಾಖೆಯ ಬಗ್ಗೆ ಮಾಹಿತಿ ನೀಡಲಿದ್ದಾರೆ.ಸಮಾರಂಭದಲ್ಲಿ ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ .ಶಾಲೆಯ ಮುಖ್ಯೋಪಾಧ್ಯಾಯ ಗೋಪಾಲಕೃಷ್ಣ ಬನ,ಎಸ್.ಡಿ.ಎಂ.ಸಿ.ಅಧ್ಯಕ್ಷ ಸುರೇಶ್ ಯು.ಕೆ.ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ನಾಯ್ಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.