ಕುಕ್ಕುಜಡ್ಕ: ಚೊಕ್ಕಾಡಿ ಪ್ರೌಢಶಾಲೆಯ ಮಂತ್ರಿ ಮಂಡಲ

0

ಕುಕ್ಕುಜಡ್ಕದಚೊಕ್ಕಾಡಿ ಪ್ರೌಢಶಾಲೆ ಶಾಲೆಯ ಮಂತ್ರಿ ಮಂಡಲ ರಚನೆಯು ಮತದಾನದ ಮೂಲಕ ಜೂ. 21 ರಂದು ನಡೆಯಿತು.

ನಾಯಕ ಸ್ಥಾನಕ್ಕೆ ಧನುಷ್, ಕೌಶಿಕ್ ಪಿ, ಶ್ರವಣ್ ಪಿ ಎಂ ಮತ್ತು ನಾಯಕಿ ಸ್ಥಾನಕ್ಕೆ ಅಹನ ಆನಂದ ಮೂಡೆಕಲ್ಲು, ಗ್ರೀಷ್ಮಾ ಬಿ ಎಸ್, ತೃಪ್ತಿ ನಾಮಪತ್ರ ಸಲ್ಲಿಸಿದರು. ಮತದಾನದಲ್ಲಿ ವಿದ್ಯಾರ್ಥಿ ನಾಯಕನಾಗಿ 10ನೇ ತರಗತಿಯ ಕೌಶಿಕ್ ಪಿ ಮತ್ತು ವಿದ್ಯಾರ್ಥಿ ನಾಯಕಿಯಾಗಿ 10ನೇ ತರಗತಿಯ ಗ್ರೀಷ್ಮಾ ಬಿ ಎಸ್ಆಯ್ಕೆಯಾದರು.

ಚುನಾವಣಾ ಅಧಿಕಾರಿಯಾಗಿ ಶಿಕ್ಷಕ ಹರಿಪ್ರಸಾದ ಕೆ, ರಾಜ್ಯಪಾಲರಾಗಿ ಮುಖ್ಯೋಪಾಧ್ಯಾಯರಾದ ಸಂಕೀರ್ಣ ಎ ಎಲ್, ಮತಗಟ್ಟೆಅಧಿಕಾರಿಯಾಗಿ ಶ್ರೀಮತಿ ಸಂಧ್ಯಾಕುಮಾರಿ ಒ, ಶ್ರೀಮತಿ ಶೋಭಾ, ಶ್ರೀಮತಿ ಜಯಶ್ರೀ ಎಂ, ಮಿಥುನ್ ಕೆ ಇವರು ಸಹಕರಿಸಿದರು. ಎಲ್ಲಾ ವಿದ್ಯಾರ್ಥಿಗಳು ಇ.ವಿ.ಎಂ ಮೂಲಕ ಮತ ಚಲಾಯಿಸಿದರು.